ಉಡುಪಿ, ಸೆ 3 (MSP): ಉಡುಪಿ ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 31ರಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ನಾಲ್ಕರಲ್ಲೂ ಕಮಲ ಕಮಾಲ್ ಮಾಡಿದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್, ಕಾರ್ಕಳ, ಕುಂದಾಪುರ ಪುರಸಭೆ , ಉಡುಪಿ ನಗರ ಸಭೆ , ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ್ದ ಬಿಜೆಪಿ ಇದೀಗ ಸ್ಥಳೀಯ ಸಂಸ್ಥೆಯಲ್ಲೂ ಬಿಜೆಪಿ ಜಯಭೇರಿ ಸಾಧಿಸಿದೆ. ಉಡುಪಿಯಲ್ಲಿ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಉಡುಪಿ ನಗರಸಭಾ ಚುನಾವಣೆಯಲ್ಲಿ ಒಟ್ಟು 91 ಅಭ್ಯರ್ಥಿಗಳು ನಗರ ಸಭಾ ಚುನಾವಣ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ನಾಲ್ಕು ಮಂದಿ ಅಭ್ಯರ್ಥಿಗಳು ಜಯಗಳಿಸಿದ್ದು ಕಾಂಗ್ರೆಸ್ ಇಲ್ಲಿ ಧೂಳಿಪಟವಾಗಿದೆ. ಬೈಲೂರು ವಾರ್ಡಿನ ರಮೇಶ್ ಕಾಂಚನ್ ,ಬಡಗಬೆಟ್ಟು ವಿಜಯ್ ಪೂಜಾರಿ , ಮೂಡು ಪೆರಂಪಳ್ಳಿ ಸೆಲಿನಾ ಕರ್ಕಡ, ಕಿನ್ನಿಮೂಲ್ಕಿ ವಾರ್ಡಿನ ಅಮೃತಾ ಕೃಷ್ಣ ಮೂರ್ತಿ ಕಾಂಗ್ರೆಸ್ಸಿನ ಅಭ್ಯರ್ಥಿಗಳಾಗಿ ಜಯಗಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಉಡುಪಿ ಜಿಲ್ಲೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಬಾಕಿ ಉಳಿದ 31 ವಾರ್ಡ್ ಗಳಲ್ಲಿ ಬಿಜೆಪಿ ಐತಿಹಾಸಿಕವಾಗಿ ಜಯಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಮಾಜಿ ಸಚಿವ ಪ್ರಮೋದ್ ಮದ್ವ ರಾಜ್ ಅವರ ಕ್ಷೇತ್ರದಲ್ಲಿ 6 ವಾರ್ಡಿಗಳಲ್ಲಿ ಕಮಲ ಮೇಲುಗೈ ಸಾಧಿಸಿದ್ದು ಕಾಂಗ್ರೆಸ್ ಗೆ ಬಾರೀ ಮುಖ ಭಂಗ ಅನುಭವಿಸಿದೆ.
ಇನ್ನೂ ಜೆ ಡಿ ಎಸ್ ಈ ಬಾರಿ ಖಾತೆ ತೆರೆಯಲು ವಿಫಲವಾಗಿದೆ. ಜೆ ಡಿ ಎಸ್ ನ ಬಹುತೇಕ ಅಭ್ಯರ್ಥಿಗಳು ಬಹುಮತಗಳ ಅಂತರದಿಂದ ಸೋಲು ಕಂಡಿದ್ದಾರೆ
ಉಡುಪಿಯ ಫಲಿತಾಂಶ ವಿವರ ಇಲ್ಲಿದೆ:
ಉಡುಪಿ ನಗರಸಭೆ
ಬಿಜೆಪಿ 31
ಕಾಂಗ್ರೆಸ್ 4
ಕಾರ್ಕಳ ಪುರಸಭೆ
ಕಾಂಗ್ರೆಸ್ 11
ಬಿಜೆಪಿ 11
ಪಕ್ಷೇತರ 1
ಕುಂದಾಪುರ ಪುರಸಭೆ
ಬಿಜೆಪಿ14
ಕಾಂಗ್ರೆಸ್ 8
ಪಕ್ಷೇತರ 1
ಸಾಲಿಗ್ರಾಮ ಪಟ್ಟಣ ಪಂಚಾಯತ್
ಪಕ್ಷೇತರ 1
ಕಾಂಗ್ರೆಸ್ 5
ಬಿಜೆಪಿ 10