ಉಡುಪಿ, ಸೆ 3 (MSP): ಉಡುಪಿಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದ್ದು, ಉಡುಪಿಯ ಮತ ಎಣಿಕೆ ಕೇಂದ್ರವಾದ ಟಿ.ಎಂ ಪೈ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ. ಗೆದ್ದ ಸಂಭ್ರಮಾಚರಣೆಗೆ ಜಿಲ್ಲಾಡಳಿತ ಅವಕಾಶ ನೀಡದಿದ್ದರೂ ಕಮಲಪಾಳಯದಲ್ಲಿ ಸಡಗರ ಮುಗಿಲು ಮುಟ್ಟಿತ್ತು. ಬೆಳಗ್ಗೆಯಿಂದಲೇ ಜಮಾಯಿಸಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಬೆಳಗ್ಗೆ 8 ಗಂಟೆಗೆ ಪ್ರಾರಂಭವಾದ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಎಣಿಕೆ ಕೇಂದ್ರದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ನಿಧಾನವಾಗಿ ಕರಗತೊಡಗಿದರು.
ಉಡುಪಿ ನಗರಸಭೆಯ ಸಂಪೂರ್ಣ ಫಲಿತಾಂಶ ಹೊರಬಿದ್ದ ಬಳಿಕ ಒಟ್ಟು 35 ವಾರ್ಡ್ ಗಳಲ್ಲಿ 31 ಸ್ಥಾನಗಳನ್ನು ಪಡೆದ ಬಿಜೆಪಿ ಗೆದ್ದು ಬೀಗಿದ್ರೆ. ಕಾಂಗ್ರೆಸ್ ಕೇವಲ ನಾಲ್ಕು ಸೀಟ್ ಗಳಿಗೆ ಸೀಮಿತವಾಯಿತು. ಬೈಲೂರು ವಾರ್ಡಿನ ರಮೇಶ್ ಕಾಂಚನ್ ,ಬಡಗಬೆಟ್ಟು ವಿಜಯ್ ಪೂಜಾರಿ , ಮೂಡು ಪೆರಂಪಳ್ಳಿ ಸೆಲಿನಾ ಕರ್ಕಡ, ಕಿನ್ನಿಮೂಲ್ಕಿ ವಾರ್ಡಿನ ಅಮೃತಾ ಕೃಷ್ಣ ಮೂರ್ತಿ ಮಾತ್ರ ಕಾಂಗ್ರೆಸ್ ನಿಂದ ಜಯಗಳಿಸಿದರು. ಆದರೆ ಇಲ್ಲಿ ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸಲು ಕಾರ್ಯಕರ್ತರೇ ಇಲ್ಲದಂತಾಯಿತು.
ಅತ್ತ ಕಡೆ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಲಕ್ಷಣಗಳು ಗೋಚರಿಸುತ್ತಿರುವಂತೆ ಕಾಂಗ್ರೆಸ್ ಪಕ್ಷದ ಬೆಂಬಲಿಗರು ನಿಧಾನವಾಗಿ ಕಡಿಮೆಯಾಗತೊಡಗಿತು. ಕೊನೆಗೆ ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸಲು ಜನವೇ ಇಲ್ಲದಂತಾಯಿತು. ಮೂಡು ಪೆರಂಪಳ್ಳಿ ಸೆಲಿನಾ ಕರ್ಕಡ ಕೂಡಾ ಕಾಂಗ್ರೆಸ್ ಪಕ್ಷದಿಂದ ಜಯಶಾಲಿಯಾಗಿದ್ದು, ಗೆದ್ದ ಖುಷಿಗೆ ಇವರಿಗೆ ಹಾರ ಹಾಕಿ ಸಿಹಿ ಹಂಚಲು ಕೂಡಾ ಸುತ್ತಮುತ್ತ ಕಾರ್ಯಕರ್ತರೇ ಇಲ್ಲದಂತಾಯಿತು. ಗೆದ್ದರೂ ಏಕಾಂಗಿಯಾಗಿ ನಿಂತಿರುವ ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಧ್ಯಮ ಮುಂದೆ ಬೆಂಬಲಿಗರಿಲ್ಲದೆ ಏಕಾಂಕಿಯಾಗಿ ಪೋಟೋಗಾಗಿ ತಮಗೆ ತಾವೇ ಮಾಲೆ ಹಾಕಿಕೊಂಡು
ಫೋಸ್ ನೀಡಿದರು.
ಮತ ಎಣಿಕೆ ಕೇಂದ್ರದಿಂದಲೂ ಸೆಲಿನಾ ಕರ್ಕಡ ತೆರಳುವಾಗ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದು ಬಳಿಕ ಪೊಲೀಸರ ರಕ್ಷಣೆಯಲ್ಲಿ , ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರ ನಡು ವೆಸೆಲಿನಾ ಕರ್ಕಡ ಎರಡು ಕೈಗಳಿಂದಕಿವಿ ಮುಚ್ಚಿಕೊಂಡು ಮುಜುಗರ ದಲೇ ಹೊರನಡೆದರು. ಈ ವಿಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.