ಕೊಚ್ಚಿ, ಸೆ 4(SM): ಕೇರಳಕ್ಕೆ ಅದ್ಯಾವ ಶನಿಕಾಟ ತಟ್ಟುತ್ತಿದೆಯೋ ಎಂಬುವುದು ತಿಳಿಯುತ್ತಿಲ್ಲ. ಕೇರಳದ ಒಂದಿಷ್ಟು ಭಾಗದಲಿ ನಿಫಾಹ್ ವೈರಸ್ ಕಾಡಿದ್ರೆ, ಮತ್ತೊಂದೆಡೆ ಜಲ ಪ್ರವಾಹ. ಇದರಿಂದ ದೇವರ ನಾಡು ಅಕ್ಷರಶಃ ಬೆಂಡಾಗಿದೆ. ಪ್ರವಾಹದ ಸಂಕಟಗಳ ಬಳಿಕ ಕೇರಳ ಮತ್ತೊಂದು ಭೀಕರ ದಾಳಿಗೆ ಸಿಲುಕಿದೆ.
ಶತಮಾನದಲ್ಲೇ ಭೀಕರ ಎನಿಸಿಕೊಂಡಿರುವ ಪ್ರವಾಹದ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವ ಮುನ್ನವೇ ರಾಜ್ಯದ ಅನೇಕ ಕಡೆ ಇಲಿ ಜ್ವರದ ಭೀತಿ ಎದುರಾಗಿದೆ. ನೀರಿನ ಮೂಲಕ ಹರಡುವ ಈ ಸೋಂಕಿಗೆ ಈಗಾಗಲೇ 41 ಮಂದಿ ಬಲಿಯಾಗಿದ್ದಾರೆ. ಸುಮಾರು 200 ಮಂದಿಯಲ್ಲಿ ಇಲಿಜ್ವರ ಸೋಂಕು ಪತ್ತೆಯಾಗಿದೆ. ಇಲಿ ಜ್ವರದಿಂದಾ ಈಗಾಗಲೇ 54 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, 41 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಜನರು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ. ಜನರು ಮುನ್ನೆಚ್ಚರಿಕೆ ಕ್ರಮವಾಗಿ ಆಂಟಿಬಯಾಟಿಕ್ಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.