ಕಾಸರಗೋಡು, ಸೆ 4 (MSP): ಸಿಪಿಎಂ ಕಾರ್ಯಕರ್ತ ಎಂ. ಬಿ ಬಾಲಕೃಷ್ಣನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವೂ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.ಯುವ ಕಾಂಗ್ರೆಸ್ ಕಾರ್ಯಕರ್ತ ಮಾಂಗಾಡ್ ನ ಪ್ರಜಿತ್ ಎ. ಕೆ,. ರಂಜಿತ್, ಶಿಬು, ಯು . ಶ್ರೀಜಯನ್, ಎ. ಸುರೇಶ್, ಶ್ಯಾಮ್ ಮೋಹನ್, ಮಜೀದ್ ಇವರನ್ನು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸೆ.5 ರಂದು ಖುಲಾಸೆ ಗೊಳಿಸಿ ತೀರ್ಪು ನೀಡಿದೆ. ಸಾಕ್ಷ್ಯಧಾರಗಳ ಕೊರತೆಯಿಂದ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.
ಕೊಲೆಯಾದ, ಸಿಪಿಎಂ ಕಾರ್ಯಕರ್ತ ಎಂ.ಬಿ. ಬಾಲಕೃಷ್ಣನ್
2013 ಸೆಪ್ಟಂಬರ್ 16ರ ತಿರುಒಣಂ ದಿನದಂದು ಉದುಮ ಮಾಂಗಾಡ್ ಅರ್ಯಡ್ಕದಲ್ಲಿ ಸಿಪಿಎಂ ಕಾರ್ಯಕರ್ತ ಎಂ.ಬಿ. ಬಾಲಕೃಷ್ಣನ್ (42)ರನ್ನು ತಂಡವು ಇರಿದು ಕೊಲೆ ಮಾಡಿತ್ತು.
ತಿರುಒಣಂ ದಿನದಂದು ಬಾಲಕೃಷ್ಣನ್, ಸಾವನ್ನಪ್ಪಿದ ಸ್ಥಳೀಯ ವ್ಯಕ್ತಿಯೊಬ್ಬರ ಮನೆಗೆ ಸಂದರ್ಶಿಸಿ ಬಳಿಕ ದ್ವಿಚಕ್ರ ವಾಹನದಲ್ಲಿ ತನ್ನ ಮನೆಗೆ ಹಿಂತಿರುಗುತ್ತಿದ್ದ ವೇಳೆ ರಾತ್ರಿ ಅರ್ಯಡ್ಕದಲ್ಲಿ ದುಷ್ಕರ್ಮಿಗಳು ಮಾರಕಾಯುಧಗಳಿಂದ ಅವರ ಮೇಲೆ ಎರಗಿ ಇರಿದು ಬರ್ಬರ ವಾಗಿ ಕೊಲೆಗೈದಿದ್ದರು. ಈ ಬಗ್ಗೆ ಬೇಕಲ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.