ಮಂಗಳೂರು ಅ ೪ : ದಸರಾ ಹಬ್ಬದ ಸಂದರ್ಭ ಬಿರುವೆರ್ ಕುಡ್ಲ ಹುಲಿ ವೇಷ ಕುಣಿತವನ್ನು ಬಳ್ಳಾಲ್ಬಾಗ್ನಲ್ಲಿ ಆಯೋಜಿಸಿ ಅದರಿಂದ ಬರೋ ನಿಧಿಯನ್ನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಾಲಕಿ ಮನ್ವಿತಾಳಿಗೆ ಹಸ್ತಾಂತರಿಸುವ ಘೋಷಣೆ ಮಾಡಿತ್ತು. ಅದರಂತೆ ಸಂಸ್ಥೆಯ ಸ್ಥಾಪಕ ಉದಯಪೂಜಾರಿ ಬಳ್ಳಾಲ್ಬಾಗ್ ನೇತೃತ್ವದಲ್ಲಿ ಮಂಗಳವಾರ ಮೇಯರ್ ಕವಿತಾ ಸನಿಲ್ ಅವರು ಜೆಪ್ಪಿನಮೊಗರು ನಿವಾಸಕ್ಕೆ ತೆರಳಿ 1 ಲ.ರೂ ಹಸ್ತಾಂತರಿಸಿದರು. ಈ ಮೂಲಕ ತಂಡ ಮಾನವೀಯತೆ ಮೆರೆದಿದೆ. ಈ ಸಂದರ್ಭ ಮಾತನಾಡಿದ ಮೇಯರ್ ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್ಬಾಗ್ ಜಾತ್ಯಾತೀತ ನೆಲೆಯಲ್ಲಿ ಸಮಾಜದಲ್ಲಿ ನೆರವಿನ ಹಸ್ತ ಚಾಚುತ್ತಿದೆ. ಇದೀಗ ಕಿಡ್ನಿ ಕಸಿ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ನಿಧಿ ಸಂಗ್ರಹಿಸಿ ನೀಡಿದೆ. ಮನ್ವಿತಾ ಶೀಘ್ರ ಗುಣಮುಖವಾಗಲೆಂದು ಹಾರೈಸಿದರು.
ಇನ್ನು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್ಬಾಗ್ ಮಾತನಾಡಿ ಪಕ್ಷಾತೀತವಾಗಿ ಬಿರುವೆರ್ ಕುಡ್ಲ ಸಮಾಜಮುಖೀಯಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ. ಮನ್ವಿತಾಳಿಗೆ ಸ್ವತಹ ತಂದೆಯೇ ಕಿಡ್ನಿ ದಾನ ಮಾಡಿ ಮಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಿರುವೆರ್ ಕುಡ್ಲ ಈ ಕುಟುಂಬಕ್ಕೆ ತನ್ನಿಂದಾದ ಸಹಾಯ ಮಾಡಿದೆ ಎಂದರು.ಹುಲಿ ವೇಷ ಕುಣಿತದಲ್ಲಿ 3 ಲ.ರೂ ಸಂಗ್ರಹವಾಗಿದ್ದು ಮೂರು ಮಂದಿ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೀಡುತ್ತಿದ್ದೇವೆ ಎಂದರು.
ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ ಚಾರ್ವಾಕ್, ಮುಂಬೈ ಉದ್ಯಮಿ ವೆಂಕಟೇಶ್ ಭಂಡಾರಿ, ಬಿರುವೆರ್ ಕುಡ್ಲದ ರಾಕೇಶ್ ಬಳ್ಳಾಲ್ಬಾಗ್,ಅಭಿಷೇಕ್ ಅಮೀನ್,ಲೋಹಿತ್ ಗಟ್ಟಿ, ರೋಶನ್ ಮೆನೇಜಸ್,ಜಾನ್ ಸುರೇಶ್ ಜಪ್ಪಿನಮೊಗರು, ಬಿರುವೆರ್ ಕುಡ್ಲ ದುಬೈ ಘಟಕದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.