ದೆಹಲಿ, ಸೆ 4(SM): ಟೀಂ ಇಂಡಿಯಾದ ಹೆಡ್ ಕೋಚ್ ಸದ್ಯ ಬಾರೀ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆಗಿನ ಡೇಟಿಂಗ್ ಗೆ ಮುಂದಾಗಿದ್ದಾರೆ ಎನ್ನುವ ಗಾಳಿ ಸುದ್ದಿ ಎಲ್ಲೆಡೆ ಹರಡುತ್ತಿದೆ. ಆದರೆ, ಈ ಬಗ್ಗೆ ಸ್ವತಃ ರವಿಶಾಸ್ತ್ರಿಯವರೇ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಎದ್ದಿರುವ ಗಾಸಿಪನ್ನು ಶಾಸ್ತ್ರಿಯವರು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.
‘ನಾವಿಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆ ಎಂಬ ಸುದ್ದಿ ಸುಳ್ಳು. ಇದೊಂದು ಸಗಣಿಯ ರಾಶಿ ಅಷ್ಟೇ. ನಮ್ಮ ನಡುವೆ ಅಂತಹ ಯಾವುದೇ ಸಂಬಂಧವಿಲ್ಲ. ನಮ್ಮ ನಡುವೆ ಏನೂ ಇಲ್ಲ’ ಎಂದು ರವಿ ಶಾಸ್ತ್ರಿ ಸ್ಪಷ್ಟ ಪಡಿಸಿದ್ದಾರೆ. ಸುಮಾರು 56 ವರ್ಷ ವಯಸ್ಸಿನ ರವಿ ಶಾಸ್ತ್ರಿಯವರಿಗೆ ಬಾಲಿವುಡ್ ನಟಿ ನಿಮ್ರತ್ ಕೌರ್ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ಇಬ್ಬರ ನಡುವೆ ಎರಡು ವರ್ಷಗಳಿಂದ ಏನೋ ನಡೆಯುತ್ತಿದೆ ಎಂದು ಇತ್ತೀಚಿಗೆ ಸುದ್ದಿ ಹರಡಿತ್ತು. ಅತ್ತ ಇಂಗ್ಲೆಂಡ್ ನಲ್ಲಿ ರವಿಶಾಸ್ತ್ರಿ ಟೆಸ್ಟ್ ಸರಣಿ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ, ಇತ್ತ ಅವರ ಪ್ರೀತಿ ಬಗ್ಗೆ ಹತ್ತು ಹಲವು ಕಮೆಂಟ್ ಗಳು ಬರುತ್ತಿವೆ. ಇವುಗಳನ್ನು ಕೇಳಿಸಿಕೊಂಡ ರವಿ ಶಾಸ್ತ್ರಿ ಸುಮ್ಮನಿರದೆ ಪ್ರತಿಕ್ರಿಯೆ ನೀಡಿದ್ದಾರೆ. 'ಸಗಣಿಯ ರಾಶಿ' ಎಂದು ಹೇಳುತ್ತಾ ಎಲ್ಲಾ ಅಂತೆ ಕಂತೆ ಕಥೆಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಪತ್ರಕರ್ತರೊಬ್ಬರ ಪ್ರಶ್ನೆಗೆ ಈ ರೀತಿಯ ಪ್ರತಿಕ್ರಿಯೆ ನೀಡುವ ಮೂಲಕ ಅಂತೆ ಕಂತೆಗಳಿಗೆ ವಿರಾಮ ಹಾಡಿದ್ದಾರೆ.