ಉಡುಪಿ, ಸೆ 5 (MSP): ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಪಲಿಮಾರು ಮಠ ಸೋದೆ ವಾದಿರಾಜ ಮಠದ ವತಿಯಿಂದ ಕಲ್ಕೂರ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಸಹಯೋಗದಲ್ಲಿ ವಿಟ್ಲಪಿಂಡಿಯಂದು ನಡೆದ ಹುಲಿ ವೇಷ ಸ್ವರ್ಧೆ ನಡೆದು ಕೊನೆಯ ಹಂತದಲ್ಲಿ ಮೊಮೆಂಟೊ ವಿತರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಪೊಲೀಸರು ಸೌಂಡ್ ಬಾಕ್ಸ್ , ವಿದ್ಯುತ್ ಸೆಟ್ ನ ವಯರ್ ಗಳನ್ನು ಕಿತ್ತೆಸೆದಿದ್ದಾರೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ಈ ವರ್ತನೆಯನ್ನು ಟೀಕಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಮರಣಿಕೆ ವಿತರಿಸುತ್ತಿದ್ದು ಕೇವಲ 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಯಲಿದೆ ಎಂದು ಸಂಘಟನಕಾರರಾದ ರಂಜನ್ ಕಲ್ಖೂರ ವಿನಂತಿಸಿದರು ಕೇಳಲಿಲ್ಲ . ಕಾರ್ಯಕ್ರಮ ವೀಕ್ಷಿಸುತ್ತಿದ್ದ ಜನರನ್ನು ಪೊಲೀಸರು ಚದುರಿಸಿದ್ದಾರೆ ಎಂದು ಶಿರೂರು ಶ್ರೀ ಅಭಿಮಾನಿಗಳು ಕಾರ್ಯಕ್ರಮದ ಸಂಘಟಕರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.