ವಿಜಯಪುರ, ಸೆ 5(MSP): ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದಾಗ ಸಿಎಂ ಆಗಿದ್ದ ಸಿದ್ದಾರಾಮಯ್ಯ ಮಾಂಸ ಆಹಾರ ಸೇವಿಸಿ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಿದ್ದು. ಇದನ್ನು ಪ್ರಶ್ನಿಸಿದಾಗ ಉಢಾಪೆಯಿಂದ ವರ್ತಿಸಿದ್ದರು. ಹೀಗಾಗಿ ಚುನಾವಣೆ ಬಳಿಕ ವರ್ಚಸ್ಸು ಕಳೆದುಕೊಂಡ ಸಿದ್ದರಾಮಯ್ಯ ಅಧಿಕಾರದಿಂದಲೂ ವಂಚಿತರಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಹೇಳಿದ್ದಾರೆ. ಧರ್ಮಸ್ಥಳಕ್ಕೆ ಮಾಂಸ ತಿಂದು ಹೋದ ಸಿದ್ದರಾಮಯ್ಯಗೆ ಅಧಿಕಾರ ಸಿಗದಿದ್ದದ್ದು, ಮಾಂಸ ತಿಂದು ಮಾನಸ ಸರೋವರಕ್ಕೆ ಹೋದಾ ರಾಹುಲ್ ಗಾಂಧಿಗೆ ಸಿಗುತ್ತಾ? ಅವರಿಗೆ ಅಧಿಕಾರ ಗ್ಯಾರಂಟಿ ಸಿಗಲ್ಲ. ತೀರ್ಥ ಯಾತ್ರೆ ಮಾಡುವಾಗ , ತನು ಮನ ಅರ್ಪಿಸಿ, ಸ್ವಚ್ಛ ಮನಸ್ಸಿನಿಂದ ಮಾಡಬೇಕು. ಅದರ ಬದಲಿ ಹಿಂದೂ ಜನರ ಮತಗಳನ್ನು ಮಾತ್ರ ಗಳಿಸಿಬೇಕು ಎಂದು ತೀರ್ಥಯಾತ್ರೆ ಮಾಡಿದ್ರೆ ಯಾವುದೇ ಪ್ರಯೋಜನ ಇಲ್ಲ. ಇದೆಲ್ಲಾ ಕೇವಲ ನಾಟಕ ಎಂದು ಆರೋಪಿಸಿದರು.
ಈಗಾಗಲೇ ಸರ್ಕಾರ ಬಿದ್ದು ಹೋಗುವ ಹಂತದಲ್ಲಿದ್ದು ಯಡಿಯೂರಪ್ಪ ಸಿ.ಎಂ ಆಗುವ ಪ್ರಕ್ರಿಯೆ ಪ್ರಾರಂಭವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಕೆಲಸಗಳನ್ನ ಜನರ ಮುಂದಿಟ್ಟು ಮತ ಗಳಿಸುವ ವಿಶ್ವಾಸವಿದೆ ಎಂದರು. ಎಲ್ಲಾ ವಿರೋಧ ಪಕ್ಷಗಳು ಕಳೆದ 5೦ ವರ್ಷಗಳಿಂದ ದೇಶವನ್ನ ಲೂಟಿ ಮಾಡುತ್ತಿದೆ. ಆದರೆ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಂತಾಗಿದೆ. ಹಾಗಾಗಿ ಬಿಜೆಪಿಯ ವಿರೋದಿಗಳೆಲ್ಲಾ ಒಂದಾಗಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ದಿನಾಚರಣೆ ಕುರಿತು ಮಾತನಾಡಿ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಎಷ್ಟು ಜನ ಯಾವ ದಿನ ಆಚರಣೆ ಮಾಡಿದರು?. ನಮ್ಮ ದೇಶದ ಪ್ರಧಾನಿಯನ್ನ ಕೊಲೆ ಮಾಡುವವರು ಚಿಂತನಾಶೀಲರು. ಹಿಂದೂಗಳು ಪ್ರಾಣಬಿಟ್ಟಾಗ ಯಾರಾದ್ರೂ ಅವರ ದಿನಾಚರಣೆ ಆಚರಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆಯಾಗಿದ್ದಾಗ ಈ ಬುದ್ಧಿಜೀವಿಗಳು ಎಲ್ಲಿಗೆ ಹೋಗಿದ್ರು? ಎಂದು ಗೌರಿ ದಿನಾಚರಣೆ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು