ಮಂಗಳೂರು, ಸೆ.6 (MSP): ಕೆಪಿಟಿ ಸರ್ಕಲ್ ಬಳಿ ರಸ್ತೆ ಮದ್ಯದಲ್ಲಿ ಕೆಟ್ಟು ನಿಂತ ಕಾರನ್ನು ಯಾರ ಸಹಾಯವೂ ಪಡೆಯದೆ ಏಕಾಂಗಿಯಾಗಿ ತಳ್ಳಿಕೊಂಡು ರಸ್ತೆ ಬದಿಗೆ ತಂದು ನಿಲ್ಲಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದು ಮಂಗಳೂರು ಸಂಚಾರ ಪೊಲೀಸರೊಬ್ಬರು ಸಾರ್ವಜನಿಕರಿಂದ ಪ್ರಶಂಶೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾರನ್ನು ತಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಮಂಗಳೂರು ಕೆಪಿಟಿ ಸರ್ಕಲ್ ನಲ್ಲಿ ಟ್ರಾಫಿಕ್ ನಿಯಂತ್ರಣ ಕರ್ತವ್ಯ ನಿರತರಾಗಿದ್ದ ನೆಲ್ಯಾಡಿಯ ಬಾಲಚಂದ್ರ ಗೌಡ ಬಿ.ವಿ ಕರ್ತ್ಯವ್ಯ ಪ್ರಜ್ಞೆ ಮೆರೆದ ಪೊಲೀಸ್.
ಪೊಲೀಸ್ ಇಲಾಖೆಗೆ ಸೇರುವ ಮುಂಚೆ ಬಾಲಚಂದ್ರ ಗೌಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸೇನೆಯಲ್ಲಿನ ಕಠಿಣ ತರಭೇತಿ ಹಾಗೂ ಅಲ್ಲಿ ಸೇವೆ ಸಲ್ಲಿಸಿರುವುದರಿಂದ ಭಾರದ ಕಾರನ್ನು ಒಬ್ಬರೇ ತಳ್ಳಿಕೊಂಡ ಹೋಗಲು ಸಾಧ್ಯವಾಯಿತು ಎಂದು ಬಾಲಚಂದ್ರ ಅವರು ಹೇಳುತ್ತಾರೆ.