ಬೆಂಗಳೂರು, ಸೆ 6 (MSP): ಇನ್ಮುಂದೆ ಅಫೀಶಿಯಲ್ ಟೂರ್ ನೆಪದಲ್ಲಿ ರಾಜ್ಯದ ಸರ್ಕಾರಿ ಅಧಿಕಾರಿಗಳು ಫಾರಿನ್ ಟೂರ್ ಹೋಗೋ ಹಾಗಿಲ್ಲ. ಹೌದು ರಾಜ್ಯ ಸರ್ಕಾರದ ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಕಡಿವಾಣ ಹಾಕಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ( ಡಿಪಿಎಆರ್) ಹೊಸ ಮಾರ್ಗ ಸೂಚಿ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳ "ಫಾರಿನ್ ಟೂರ್" ಗಳ ಪ್ರವೃತ್ತಿ ಹೆಚ್ಚಾಗುತ್ತಿದೆ. ನಿರ್ದೆಷ್ಟ ಕಾರಣಗಳನ್ನು ನೀಡದೆ ಈ ಬಗ್ಗೆ ಪ್ರಸ್ತಾಪಸಲ್ಲಿಸುತ್ತಿರುವುದು ಮಾರ್ಗಸೂಚಿ ಪರಿಷ್ಕರಿಸಲು ಕಾರಣವಾಗಿದೆ. ಡಿಪಿಎಆರ್ ನೂತನ ಮಾರ್ಗಸೂಚಿ ಪ್ರಕಾರ ಇನ್ಮುಂದೆ ಅಧಿಕಾರಿಗಳ ನಿಯೋಗ ಅಥವಾ ಅಧಿಕಾರಿಗಳ ಪ್ರವಾಸದ ಪ್ರಸ್ತಾಪನೆಯನ್ನು ಒಪ್ಪಿಗೆಗಾಗಿ ನೇರವಾಗಿ ಸಿಎಂಗೆ ಕಳುಹಿಸುವಂತಿಲ್ಲ. ಯಾವ ಟೂರ್ ಆಗಿದ್ರೂ ಕೂಡಾ ಸಂಬಂಧಪಟ್ಟ ಅಧಿಕಾರಿಗಳ ಅನುಮೋದನೆ ಮೊದಲು ಸಿಗಬೇಕು. ನಂತರ ಅದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಕಳುಹಿಸಬೇಕು.
ಇನ್ನು ಕೇಂದ್ರ ಸರ್ಕಾರದ ಸೇವೆಯಲ್ಲಿರುವವರೂ ಕೂಡಾ ಪ್ರವಾಸಕ್ಕೆ ಹೋಗಲು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದ ಒಪ್ಪಿಗೆ ಅತ್ಯಗತ್ಯ. ಇವೆಲ್ಲಾ ಆದ ಬಳಿಕ ಡಿಪಿಎಆರ್ ಅನುಮೋದನೆ ನೀಡಲು 3 ವಾರಗಳ ಕಾಲವಕಾಶ ಬೇಕಾಗಿರುವುದರಿಂದ ಮುಂಚೆಯೇ ಪ್ರಸ್ತಾವ ಸಲ್ಲಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.