ಮಂಗಳೂರು, ಸೆ07(SS): ಲಾರಿ ಚಾಲಕನೊಬ್ಬ ಬಟ್ಟೆ ಬಿಚ್ಚಿ ಟ್ರಾಫಿಕ್ ಸಿಗ್ನಲ್ನಲ್ಲಿ ಮಲಗಿ ಪ್ರತಿಭಟನೆ ನಡೆಸಿದ ಘಟನೆಯೊಂದು ನಗರದ ಹೊರವಲಯದ ಸುರತ್ಕಲ್ನಲ್ಲಿ ನಡೆದಿದೆ.
ಟ್ರಾಫಿಕ್ ಸಿಗ್ನಲ್ನಲ್ಲಿ ಅವಾಂತರ ಸೃಷ್ಟಿಸಿದ ಈತ ಮದ್ಯ ಪ್ರದೇಶ ಮೂಲದ ಲಾರಿ ಚಾಲಕ ಎಂದು ತಿಳಿದುಬಂದಿದೆ.
ಟ್ರಾಫಿಕ್ ಪೊಲೀಸರು ಹಲ್ಲೆ ನಡೆಸಿದರು ಎಂಬ ಕಾರಣಕ್ಕೆ ಲಾರಿ ಚಾಲಕನೊಬ್ಬ ಬಟ್ಟೆ ಬಿಚ್ಚಿ ಟ್ರಾಫಿಕ್ ಸಿಗ್ನಲ್ನಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾನೆ. ಪಣಂಬೂರು ಬಳಿ ಲಾರಿ ನಿಲ್ಲಸಲಿಲ್ಲ ಎಂದು ಸುರತ್ಕಲ್ನಲ್ಲಿ ಪೊಲೀಸರು ಲಾರಿಯನ್ನು ತಡೆದಿದ್ದರು. ಆದರೆ ಲಾರಿ ಚಾಲಕ ಲಾರಿ ನಿಲ್ಲಿಸಿರಲಿಲ್ಲ. ಈ ಸಂದರ್ಭ ಟ್ರಾಫಿಕ್ ಪೊಲೀಸರು ಮತ್ತು ಲಾರಿ ಚಾಲಕನ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಲಾರಿ ಚಾಲಕ 4 ಜನ ಟ್ರಾಫಿಕ್ ಪೊಲೀಸರಿಂದ ಹಲ್ಲೆಯಾಗಿದೆ ಎಂದು ರಸ್ತೆಯಲ್ಲಿಯೇ ಮಲಗಿ ಪ್ರತಿಭಟಿಸಿದ್ದಾನೆ. ಮಾತ್ರವಲ್ಲ, ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣಾ ಪೊಲೀಸರ ಮೇಲೆ ಹಲ್ಲೆ ಆರೋಪ ಮಾಡಿದ್ದಾನೆ.
ಸುರತ್ಕಲ್ ಠಾಣಾ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.