ಉಳ್ಳಾಲ, ಸೆ08(SS): ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರ ಪೆರ್ಮನ್ನೂರಿನಲ್ಲಿ ಮಾತೆ ಮರಿಯಮ್ಮನವರ ಜನ್ಮ ದಿನ, ತೆನೆ ಹಬ್ಬ ಹಾಗೂ ಕುಟುಂಬದ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಚಿತ್ರ ಕೃಪೆ – ಸ್ಟಾರ್ ಸ್ಟುಡಿಯೋ, ಉಳ್ಳಾಲ
ಭಕ್ತಿವಿಧಿಗಳನ್ನು ಮಂಗಳೂರು ಧರ್ಮಪ್ರಾಂತ್ಯದ ಕಿರು ಕ್ರೈಸ್ತ ಸಮುದಾಯದ ನಿರ್ದೇಶಕ ಫಾದರ್ ಜೋಕಿಮ್ ಫೆರ್ನಾಂಡಿಸ್ ನೆರವೇರಿಸಿದರು. ಈ ಸಂಧರ್ಭದಲ್ಲಿ ಧರ್ಮಕೇಂದ್ರದ ಪ್ರಧಾನ ಗುರು ಫಾ| ಜೆ. ಬಿ. ಸಲ್ಡಾನ್ಹಾ, ಸಹಾಯಕ ಧರ್ಮಗುರುಗಳಾದ ಫಾ| ಸ್ಟ್ಯಾನಿ, ಫಾ| ಲೈಝಿಲ್ ಉಪಸ್ಥಿತರಿದ್ದರು.
ಫಾ| ವಲೇರಿಯನ್, ಫಾ| ವಿಪಿನ್, ಫಾ| ರೊಕ್ಕಿ ಸೇರಿದಂತೆ ಅನೇಕ ಧರ್ಮಭಗಿನಿಯರು, ಪಾಲನ ಮಂಡಳಿಯ ಸದಸ್ಯರು, ಭಕ್ತಾಧಿಗಳು ಭಕ್ತಿವಿಧಿಗಳಲ್ಲಿ ಭಾಗವಹಿಸಿ ದೇವರಿಗೆ ಹೂವುಗಳನ್ನು ಅರ್ಪಿಸಿದರು.
ಇದೇ ವೇಳೆ ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರದ ಶತಮನೋತ್ಸವ ಸ್ಮಾರಕ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕ್ರೈಸ್ತ ಸಮುದಾಯದವರು ತಾವು ಬೆಳೆಸಿದ ತೆನೆಯನ್ನು ದೇವರಿಗೆ ಅರ್ಪಿಸಿ ಬಳಿಕ ವಿತರಿಸಿದರು. ಜೊತೆಗೆ ಕಬ್ಬುಗಳನ್ನು ಭಕ್ತ ಜನರಿಗೆ ಹಂಚಲಾಯಿತು.