ಉಡುಪಿ, ಅ 4: ಪ್ರೋ. ಕೆ ಎಸ್ ಭಗವಾನ್ ವಿರುದ್ದ ಉಡುಪಿಯಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ರಾಜ್ಯದ ರೈತಾಪಿ ಹಾಗೂ ಜನರ ಜೀವ ನದಿ ಕಾವೇರಿಯ ಬಗ್ಗೆ ಮತ್ತು ಸಮಸ್ತ ಹಿಂದೂಗಳ ದೇವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಿರುವ ಪ್ರೋ. ಕೆ ಎಸ್ ಭಗವಾನ್ ವಿರುದ್ದ ರಾಜ್ಯದ್ಯಾಂತ ಟೀಕೆಗಳು ಹಾಗೂ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಕಾರ್ಮಿಕ ವೇದಿಕೆಯೂ ಭಾರೀ ಆಕ್ರೋಶ ವ್ಯಕ್ತಪಡಿಸಿವೆ. ಹೀಗಾಗಿ ಉಡುಪಿ ನಗರ ಠಾಣೆಯಲ್ಲಿ ಇಂದು ಈ ಎರಡು ಸಂಘಟನೆಗಳು ಭಗವಾನ್ ವಿರುದ್ದ ದೂರು ದಾಖಲಿಸಿದೆ.
ದೂರು ನೀಡಿದ ಬಳಿಕ ಕರ್ನಾಟಕ ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಮಾತನಾಡಿ, ಕಾವೇರಿನದಿ ರಾಜ್ಯದ ರೈತಾಪಿ ವರ್ಗ ಹಾಗೂ ಜನರ ಜೀವನಾಡಿಯಾಗಿದೆ. ಕಾವೇರಿ ಕೇವಲ ಕರ್ನಾಟಕದ ಸೊತ್ತು ಅಲ್ಲ ಅದು ತಮಿಳುನಾಡಿಗೂ ಸೇರುವಂತಹದು ಎಂಬ ಅನಗತ್ಯ ಹೇಳಿಕೆ ನೀಡಿ ರಾಜ್ಯದಲ್ಲಿ ಆಶಾಂತಿ ನೆಲೆಸುವ ವಾತಾವರಣ ಸೃಷ್ಟಿ ಮಾಡಿದ್ಧಾರೆ. ಇನ್ನೂ ಅನಾದಿ ಕಾಲದಿಂದಲೂ ಹಿಂದೂಗಳು ಪೂಜಿಸುತ್ತಾ ಬರುತ್ತಿರುವ ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಹಿಂದೂ ನಾಸ್ತಿಕರ ಧಾರ್ಮಿಕ ಭಾವನೆಗೆ ದಕ್ಕೆಯುಂಟು ಮಾಡಿದ್ಧಾರೆ. ಈ ರೀತಿಯ ಹೇಳಿಕೆ ನೀಡಿರುವ ಭಗವಾನ್ ಅವರನ್ನು ರಾಜ್ಯದ ಜನತೆ ಹಾಗೂ ಹಿಂದೂ ನಾಸ್ತಿಕರು ಕ್ಷಮಿಸುವುದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ರು. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅನ್ಸರ್ ಅಹಮ್ಮದ್, ದೆಂದೂರು ದಯಾನಂದ ಶೆಟ್ಟಿ, ಸಂದೀಪ್ ಕುಮಾರ್, ಸುಧಾಕರ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.