ಕಾಸರಗೋಡು, ಮಾ.28 (DaijiworldNews/PY): ಜಿಲ್ಲೆಯಲ್ಲಿ ರವಿವಾರ ಅತ್ಯಧಿಕ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, 163 ಮಂದಿಗೆ ಪಾಸಿಟಿವ್ ಪತ್ತೆಯಾಗಿದೆ.

ಈ ನಡುವೆ ರವಿವಾರ 35 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ 30,583 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 1,208 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 6,665 ಮಂದಿ ನಿಗಾದಲ್ಲಿದ್ದಾರೆ.
ಇದುವರೆಗೆ ಒಟ್ಟು 32,099 ಮಂದಿಗೆ ಸೋಂಕು ದೃಢಪಟ್ಟಿದೆ.