ಮಂಗಳೂರು, ಮಾ. 28 (DaijiworldNews/SM): ಬೆಳಗಾವಿಯಲ್ಲಿ ಡಿಕೆಶಿಗೆ ಚಪ್ಪಲಿ ಎಸೆಯಲು ಯತ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಡಿ.ಕೆ.ಶಿವಕುಮಾರ್ ಅವರಿಗೆ ಚಪ್ಪಲಿ ಎಸೆದಿಲ್ಲ ಎಂದಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದಗಡೆಯಲ್ಲಿದ್ದ ಕೊನೆಯ ಭಾಗದ ವಾಹನಕ್ಕೆ ಎಸೆದಿರಬಹುದು. ಅಲ್ಲಿ ಯಾವುದೇ ಸಣ್ಣ ಘಟನೆ ಕೂಡ ಆಗಬಾರದು. ಬೆಳಗಾವಿಗೆ ಯಾರೆಲ್ಲಾ ಬರ್ತಾರೆ ಅವರಿಗೆಲ್ಲಾ ಭದ್ರತೆ ನೀಡಬೇಕು ಎಂಬುವುದಾಗಿ ಅಲ್ಲಿಯ ಕಮಿಷನರ್ ಗೆ ಈಗಾಗಲೇ ಸೂಚನೆ ಕೊಟ್ಟಿದ್ದೇನೆ ಎಂದಿದ್ದಾರೆ.
ಯಾರು ಕಾನೂನು ಕೈಗೆತ್ತಿಕೊಳ್ತಾರೆ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಕಾಂಗ್ರೆಸ್ ನವರು ಏನ್ ಹೇಳ್ತಾರೆ. ಇನ್ನೊಬ್ಬರು ಏನ್ ಹೇಳ್ತಾರೆ. ಅದು ಇಂಪಾರ್ಟಂಟ್ ಅಲ್ಲ. ಕಾನೂನುಬದ್ದವಾಗಿ ನಾವು ತನಿಖೆ ಮಾಡುತ್ತೇವೆ. ಯಾರೂ ಏನು ಹೇಳಿಕೆ ಕೊಟ್ರು ಅದು ನಮಗೆ ಸಂಬಧಪಟ್ಟಿದ್ದಲ್ಲ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನವರು ಮೇಟಿ ಪ್ರಕರಣದಲ್ಲಿ ಹೇಗೆ ನಡ್ಕೊಂಡ್ರು? ಆ ಪ್ರಕರಣದಪ್ಲಿ ಕೇಸ್ ಕೂಡ ಬುಕ್ ಮಾಡಲಿಲ್ಲ. ಹೀಗಾಗೆ ಕಾಂಗ್ರೆಸ್ ನವರ ಹೇಳಿಕೆಗೆ ನಾನು ಮಹತ್ವ ಕೊಡೊದಿಲ್ಲ. ಎಸ್.ಐ.ಟಿ ಯಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ಕಾನೂನುಬದ್ದವಾಗಿ ಕೆಲಸ ಮಾಡುತ್ತಾರೆ. ಯಾರ ಪ್ರಭಾವಕ್ಕೆ ಮಣಿದು ಕೆಲಸ ಮಾಡೋದಿಲ್ಲ ಎಂದಿದ್ದಾರೆ.