ಬಂಟ್ವಾಳ, ಮಾ 29 (DaijiworldNews/MS): ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವಥಪುರ ಮಿಜಾರುಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ಭಾನುವಾರ ಕಕ್ಯಪದವುನಲ್ಲಿ ನಡೆದ ಕಂಬಳದಲ್ಲಿ 8.78 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಕಳೆದ ವಾರ ವೇಣೂರಿನಲ್ಲಿ ನಡೆದ ಕಂಬಳದಲ್ಲಿ 8.89 ಸೆಕೆಂಡ್ ಗಳಲ್ಲಿ 100 ಮೀಟರ್ ಕ್ರಮಿಸಿ ಅವರು ದಾಖಲೆ ಬರೆದಿದ್ದರು. ಕಕ್ಯಪದವು ಮೈರಾ ಸತ್ಯ - ಧರ್ಮ ಜೋಡುಕರೆ ಬಯಲು ಕಂಬಳದಲ್ಲಿ ತಮ್ಮ ದಾಖಲೆಯನ್ನು ಭಾನುವಾರ ಹಿಂದಿಕ್ಕಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಮಿಜಾರು ಪ್ರಸಾದ್ ನಿಲಯದ ಶಕ್ತಿಪ್ರಸಾದ್ ಮಾಲೀಕರಾಗಿರುವ ಕೋಣಗಳನ್ನು ಓಡಿಸಿದ ಶ್ರೀನಿವಾಸಗೌಡ 8.78 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸಿ ದಾಖಲೆ ಬರೆದಿದ್ದಾರೆ. ಈ ಬಾರಿಯ ಕಂಬಳದ ಸೀಸಸ್ ನಲ್ಲಿ ಅತಿ ಹೆಚ್ಚು 18 ಪದಕಗಳನ್ನು ಗಳಿಸಿದ್ದಾರೆ.