ವಿಟ್ಲ, ಮಾ 29 (DaijiworldNews/MS): ವಿವಾಹ ಸಮಾರಂಭಕ್ಕೆ ಬಂದಿದ್ದ ಬಾಲಕನ ಮೇಲೆ ಕಬಕ ಮೂಲದ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ- ಪುತ್ತೂರು ರಸ್ತೆಯ ಮನೆಯೊಂದರಲ್ಲಿ ಮದುವೆ ಕಾರ್ಯಕ್ರಮವಿತ್ತು. ಇಲ್ಲಿಗೆ ಪುತ್ತೂರು ಮೂಲದ ಹನ್ನೊಂದು ವರ್ಷದ ಬಾಲಕ ಮೆಹೆಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಇಲ್ಲಿಗೆ ಕಬಕ ಮೂಲದ ಹಮೀದ್ ಯಾನೆ ಮೌಲ ಅಮ್ಮಿ ಎಂಬಾತ ಕೂಡಾ ಬಂದಿದ್ದ. ಈ ಸಂದರ್ಭ ಆರೋಪಿಯು ಬಾಲಕನನ್ನು ಪುಸಲಾಯಿಸಿ ಹೊರಗಡೆ ಕರೆದುಕೊಂಡು ಹೋಗಿ ಲೈಂಗಿನ ದೌರ್ಜನ್ಯ ನೀಡಿದ್ದಾರೆನ್ನಲಾಗಿದೆ.
ಈ ಬಗ್ಗೆ ಬಾಲಕ ಮನೆಯವರಿಗೆ ವಿಚಾರ ತಿಳಿಸಿದ್ದು, ಆತನ ಪೋಷಕರು ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣದ ದಾಖಲಿಸಿದ್ದಾರೆ.