ಕುಂದಾಪುರ, ಸೆ 10 (MSP): ಕುಂದಾಪುರದಲ್ಲಿ ಕಾಂಗ್ರೆಸ್ ಬಲವಂತದಿಂದ ಬ್ಯಾಂಕ್ ಹಾಗೂ ಅಂಗಡಿಗಳನ್ನು ಮುಚ್ಚಿಸಿ ತೆರಳಿದರೆ, ಬಳಿಕ ಬಂದ ಬಿಜೆಪಿ ಕಾರ್ಯಕರ್ತರು, ಬಲವಂತದಿಂದ ಅಂಗಡಿ ಮುಚ್ಚಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿ ಅಂಗಡಿ ತೆರೆಯಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಈ ಸಂದರ್ಭ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟಿಸಿ, ಬಲವಂತವಾಗಿ ಮುಚ್ಚಿದ ಅಂಗಡಿ ಹಾಗೂ ಬ್ಯಾಂಕ್ ಗಳನ್ನು ತೆರೆಯುವಂತೆ ಆಗ್ರಹಿಸಿದರು. ಕಾಂಗ್ರೆಸ್ ನ ಗೂಂಡಾ ವರ್ತನೆ ಸರಿಯಲ್ಲ ಎಂದು ಆಪಾದಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಹಾಗೊ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು ಹಾಗೂ ಬಲವಂತವಾಗಿ ಬಂದ್ ಮಾಡಲು ಅವಕಾಶ ಕೊಡುದಿಲ್ಲ,ಎಂದು ಡಿವೈಎಸ್ಪಿ ಅಶ್ವಾಸನೆ ನೀಡಿದ ಬಳಿಕ ಬಿಜೆಪಿ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಿಂದ ಹಿಂದೆ ಸರಿದರು. ಪ್ರತಿಭಟನೆಯಲ್ಲಿ ಕಾಡುರು ಸುರೇಶ್ ಶೆಟ್ಡಿ, ಸುನಿಲ್ ಹೆರಿಕುದ್ರು, ಭಾಸ್ಕರ ಬಿಲ್ಲವ.ಸಂತೋಷ ಶೆಟ್ಟಿ.ದಿವಾಕರ ಖಡ್ಗಿ ಮೊದಲಾದವರು ಉಪಸ್ಥಿತರಿದ್ದರು.