ಕಾರ್ಕಳ, ಮಾ 30 (DaijiworldNews/MS): ಕೆರ್ವಾಶೆ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಶಸ್ತ್ರ ಸಜ್ಜಿತರಿಬ್ಬರು ಕಾಣ ಸಿಕ್ಕಿರುವುದು ಹಲವು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ
ಸಿಂಗಳಿಕೆ ಗಣತಿಗಾಗಿ ಕೆರ್ವಾಶೆ ದೇವರಗುಂಡಿ ಎಂಬಲ್ಲಿ ಕಾರ್ಕಳ ವನ್ಯ ಜೀವಿ ವಲಯ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಸದಪ್ಪೆ ಎಂಬವರು ಭೇಟೆ ನಿಯಂತ್ರಣ ಕಾವಲುಗಾರ ಹರೀಶ್ ಕುಮಾರ್ ಎಂಬವರೊಂದಿಗೆ ನಿಗದಿ ಪಡಿಸಿದ ಅರಣ್ಯದೊಳಗೆ ಹೋಗುತ್ತಿದ್ದಾಗ ದೇವರಗುಂಡಿ ಪ್ರದೇಶ ವ್ಯಾಪ್ತಿಯಲ್ಲಿ ಇಬ್ಬರು ಕಾಣಸಿಕ್ಕಿದ್ದರು.
ಅವರಲ್ಲಿ ಓರ್ವ ಕೋವಿ ಹಿಡಿದುಕೊಂಡಿದ್ದನು. ಅರಣ್ಯ ಸಿಬ್ಬಂದಿಗಳನ್ನು ಕಂಡೊಂಡನೆ ಅವರಿಬ್ಬರು ಅರಣ್ಯದೊಳಗೆ ಓಡಿ ತಲೆ ಮರೆಸಿಕೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಕೋವಿಗೆ ಬಳಸುವ ಮದ್ದುಗುಂಡುಗಳು, ಚಪ್ಪಲಿಗಳು, ಮೊಬೈಲ್ ಫೋನ್ ಪತ್ತೆಯಾಗಿರುತ್ತದೆ. ಈ ಕುರಿತು ಕೇಸುದಾಖಲಾಗಿದೆ.