ಬಂಟ್ವಾಳ, ಮಾ 30 (DaijiworldNews/MS): ಗ್ಯಾಸ್ ಟ್ಯಾಂಕರ್ ಮತ್ತು ಇಕೋ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ನಡೆದ ಪರಿಣಾಮ ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮಾ. 30 ರ ಮಂಗಳವಾರ ಇಲ್ಲಿನ ಮೆಲ್ಕಾರ್ ಪಾಣೆಮಂಗಳೂರು ಬಳಿ ನಡೆದಿದೆ.



ಮೂಲ್ಕಿ ಸಮೀಪದ ಕಿನ್ನಿಗೋಳಿ ಐಕಳ ನಿವಾಸಿಗಳು ಸುಳ್ಯ ನಿಂತಿಕಲ್ಲು ಎಂಬಲ್ಲಿ ಕೊರಗಜ್ಜ ದೈವದ ನರ್ತನ ಸೇವೆಗೆ ಡೋಲು ಬಾರಿಸುವ ಸೇವೆ ಸಲ್ಲಿಸಿದ ಬಳಿಕ ಬೆಳಿಗ್ಗೆ ಹಿಂತಿರುಗುತ್ತಿದ್ದರು ಎಂದು ತಿಳಿದುಬಂದಿದೆ
ಅವರು ಪಾಣೆಮಂಗಳೂರು ಸಮೀಪಿಸುತ್ತಿದ್ದಂತೆ ಮುಂದಿನಿಂದ ಬಂದ ಗ್ಯಾಸ್ ಟ್ಯಾಂಕರ್ ಲಾರಿಗೆ ಮುಖಾಮುಖಿ ಢಿಕ್ಕಿಯಾಗಿದೆ.
ಢಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಘನಾಥ, ಶೇಖರ ಐಕಳ, ಮುದರ, ರಾಜೇಶ್, ಸಂದೀಪ್ ಗೋಪಾಲ ಎಂಬವರಿಗೆ ಗಂಭೀರ ಗಾಯವಾಗಿದೆ.