ಉಡುಪಿ, ಮಾ.30 (DaijiworldNews/HR): ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವವ ಹಿನ್ನಲೆಯಲ್ಲಿ ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತವಾಗಿರಬೇಕು, ಧಾರ್ಮಿಕ ಉತ್ಸವದ ನೆಪದಲ್ಲಿ ಮನೋರಂಜನೆಗೆ ಅವಕಾಶ ಇಲ್ಲ" ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಉಡುಪಿ ಉತ್ಸವಕ್ಕೆ ಅವಕಾಶ ಇಲ್ಲ. ಕೊರೊನಾ ಕಾಲದಲ್ಲಿ ಮನೋರಂಜನೆಗೆ ಅವಕಾಶ ಇಲ್ಲ ಆದ್ದರಿಂತ ತಮ್ಮ ಬಳಿ ಬಂದ ಅರ್ಜಿಯನ್ನು ರಿಜೆಕ್ಟ್ ಮಾಡಿದ್ದೇವೆ ಈಗಾಗಲೇ ಸಿದ್ಧತೆ ಮಾಡಿದ್ದರೆ ವಾಪಾಸ್ ಕಿತ್ತುಕೊಂಡು" ಎಂದರು.
ಜಿಲ್ಲೆಯಲ್ಲಿ ನಾಟಕ, ಯಕ್ಷಗಾನ ಸಿನೆಮಾ ಬ್ಯಾನ್ ಮಾಡಿಲ್ಲ ಮತ್ತು ಮದುವೆ ಸಭಾಂಗಣದಲ್ಲಿ ನಿಯಮ ಅನುಸರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಾಗುವುದು ಮತ್ತು ಆಯೋಜಕರು ನಿರ್ಬಂಧಗಳನ್ನು ಪಾಲಿಸದಿದ್ದರೆ ಅವರ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು" ಎಂದರು.
ಇನ್ನು "ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಿನ ಕೊರೊನಾ ಮಾರ್ಗಸೂಚಿ ಪಾಲಿಸಬೇಕಿದ್ದು, ನಿಯಮ ಪಾಲಿಸದಿದ್ದರೆ ಎಪಿಡಮಿಕ್ ಆ್ಯಕ್ಟ್ ಅಡಿಯಲ್ಲಿ ಕ್ರಮ ಕೈಗೊಳ್ಳಲು ಡಿಡಿಪಿಐ, ಡಿಡಿಪಿಯುಗೆ ಸೂಚನೆ ನೀಡಲಾಗಿದೆ" ಎಂದು ಹೇಳಿದ್ದಾರೆ.