ದೆಹಲಿ, ಸೆ 10(SM): ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದ್ದರೆ, ಇತ್ತ ಜಾಗತಿಕ ಮಟ್ಟದಲ್ಲಿ ಭಾರತದ ರುಪಾಯಿ ಮೌಲ್ಯ ಕುಸಿದಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನ ವೇಳೆ ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ ಕುಸಿತ ಕಂಡಿದ್ದು, ಕನಿಷ್ಠ 72.67 ರೂಪಾಯಿಗೆ ತಲುಪಿದೆ.
ಶುಕ್ರವಾರ ವಹಿವಾಟಿನ ಅಂತ್ಯದ ವೇಳೆ ರೂಪಾಯಿ ಮೌಲ್ಯ ಡಾಲರ್ ಎದುರು 72.73 ರೂಪಾಯಿಗಳಾಗಿತ್ತು. ಸೋಮವಾರ ವಹಿವಾಟು ಪ್ರಾರಂಭವಾದಾಗ ರುಪಾಯಿ ಮೌಲ್ಯ 72.18 ರೂಗೆ ತಲುಪಿತ್ತು. ಮತ್ತೆ ರುಪಾಯಿ ಮೌಲ್ಯ ಇಳಿಮುಖಗೊಂಡು 72.67ಕ್ಕೆ ತಲುಪಿದೆ.
ಹಣದುಬ್ಬರ, ಅಮೆರಿಕ ಡಾಲರ್ಗೆ ಬೇಡಿಕೆ ಹೆಚ್ಚಳ, ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ರೂಪಾಯಿ ಮೌಲ್ಯ ಸತತ ಕುಸಿತ ಕಾಣುತ್ತಿದೆ. ಷೇರು ಮಾರುಕಟ್ಟೆಯಲ್ಲೂ ಕುಸಿತ ಕಂಡು ಬಂದಿದ್ದು, ಸೆನ್ಸೆಕ್ಸ್ ಮೌಲ್ಯ ಕೂಡ ಕುಸಿತ ಕಂಡಿದೆ. ಮಧ್ಯಾಹ್ನ 12.30ರ ವೇಳೆಗೆ 418.39 ಅಂಕಕ್ಕೆ ತಲುಪಿದೆ. ನಿಫ್ಟಿಯಲ್ಲೂ ಕುಸಿತ ಕಂಡು ಬಂದಿದ್ದು, ಒಟ್ಟು 118.45 ಅಂಕ ಕುಸಿದು 11,470.65 ಕ್ಕೆ ತಲುಪಿದೆ.