ದೆಹಲಿ, ಸೆ 10(SM): ಹೈದರಾಬಾದ್ ಅವಳಿ ಬಾಂಬ್ ಸ್ಪೋಟ ಪ್ರಕರಣದ ಇಬ್ಬರು ಆರೋಪಿಗಳ ವಿರುದ್ಧ ಶಿಕ್ಷೆ ವಿಧಿಸಿ ವಿಶೇಷ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯ ತೀರ್ಪು ನೀಡಿದೆ. ಅನೀಕ್ ಸಯೀದ್ ಮತ್ತು ಇಸ್ಮಾಯಿಲ್ ಚೌಧರಿಗೆ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.
ಇದೇ ಪ್ರಕರಣದ ಇನ್ನೋರ್ವ ಆರೋಪಿ ಅಂಜುಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.ಈ ಪ್ರಕರಣದ ಮತ್ತಿಬ್ಬರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಇವರಲ್ಲದೆ ಇನ್ನೂ ಮೂವರು ಆರೋಪಿಗಳು ಈಗಲೂ ತಲೆ ಮರೆಸಿಕೊಂಡಿದ್ದಾರೆ. 11 ವರ್ಷಗಳ ಹಿಂದೆ ಹೈದರಾಬಾದಿನ ಗೋಕುಲ್ ಚ್ಯಾಟ್ ಮತ್ತು ಲುಂಬಿನಿ ಪಾರ್ಕ್ನಲ್ಲಿ ಅವಳಿ ಬಾಂಬ್ ಸ್ಫೋಟ ನಡೆದಿತ್ತು. ಪ್ರಕರಣದಲ್ಲಿ 42 ಜನರು ಮೃತಪಟ್ಟಿದ್ದರು. 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ಪೋಟಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು.