ಮಂಜೇಶ್ವರ, ಏ.01 (DaijiworldNews/HR): ಬಸ್ಸು ಪ್ರಯಾಣಿಕನಿಂದ ದಾಖಲೆಗಳಿಲ್ಲದ 20 ಲಕ್ಷ ರೂ.ವನ್ನು ವಿಶೇಷ ತಪಾಸಣಾ ತಂಡ ವಶಕ್ಕೆ ತೆಗೆದುಕೊಂಡ ಘಟನೆ ಮಂಜೇಶ್ವರದಲ್ಲಿ ನಡೆದಿದೆ.

ಸಾಂಧರ್ಭಿಕ ಚಿತ್ರ
ಕೇರಳ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಗಡಿಯ ತಲಪಾಡಿ ಚೆಕ್ ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ನಗದು ಪತ್ತೆಯಾಗಿದೆ.
ಕಾಸರಗೋಡು - ಮಂಗಳೂರು ನಡುವಿನ ಕೆಎಸ್ಅರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಆಲಂಪಾಡಿಯ ಮುಹಮ್ಮದ್ ಕುಂಞ ಎಂಬಾತನಿಂದ ನಗದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮತದಾರರಿಗೆ ಹಂಚಲು ಹೊರರಾಜ್ಯದಿಂದ ಅಕ್ರಮವಾಗಿ ಹಣ, ಮದ್ಯ ಹಾಗೂ ಇನ್ನಿತರ ವಸ್ತುಗಳು ಕೇರಳಕ್ಕೆ ಸಾಗಾಟ ಮಾಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಗಡಿಯಲ್ಲಿ ವಿವಿಧ ಇಲಾಖೆಗಳ ನೇತೃತ್ವದಲ್ಲಿ ವಿಶೇಷ ತಂಡ ತಪಾಸಣೆ ನಡೆಸುತ್ತಿದೆ.