ನವದೆಹಲಿ, ಸೆ.11 (MSP): ದೆಹಲಿಯಲ್ಲಿ ಸೆ.11ರ ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತಿವೃಷ್ಟಿ ಹಾಗೂ ಒಳನಾಡಿನಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಬಗ್ಗೆ ವಿವರಿಸಿದೆ. ಜತೆಗೆ ಕೊಡಗು ಸೇರಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗೆ 2000 ಕೋಟಿ ರೂ. ಪ್ಯಾಕೇಜ್ ಘೋಷಿಸಿ ಅನುದಾನ ಬಿಡುಗಡೆ ಮಾಡುವಂತೆ ಮಾಡಿದೆ. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಧಾನಿ ತತ್ ಕ್ಷಣವೇ ಸಮೀಕ್ಷೆಗೆ ಅಧಿಕಾರಿಗಳ ತಂಡ ಕಳುಹಿಸುವುದಾಗಿ ಭರವಸೆ ಕೊಟ್ಟರು . ಅದರಂತೆಯೇ ಕೊಡಗು ಸಹಿತ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿ ಬಗ್ಗೆ ಸಮೀಕ್ಷೆ ನಡೆಸಲು ಕೇಂದ್ರ ಸರಕಾರ ಉನ್ನದ ಮಟ್ಟದ ಅಧಿಕಾರಿಗಳ ತಂಡ ಇಂದು (ಸೆ.11 ರ ಮಂಗಳವಾರ) ರಾಜ್ಯಕ್ಕೆ ಆಗಮಿಸಲಿದ್ದು, ಸೆ.12 ಮತ್ತು 13 ರಂದು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡಲಿದೆ.
ಇನ್ನು ದೆಹಲಿಯಲ್ಲಿ ನಿಯೋಗದ ಭೇಟಿಯ ಸಂದರ್ಭ ತಂಡದಲ್ಲಿದ್ದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡು ಆತ್ಮೀಯತೆ ಮಾತನಾಡಿದರು. ನೀರಾವರಿ ಸೇರಿದಂತೆ ರಾಜ್ಯದ ಯಾವುದೇ ವಿಚಾರ ಪ್ರಸ್ತಾಪವಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ಎಚ್.ಡಿ ದೇವೇಗೌಡರನ್ನು ನೆನಪಿಸಿಕೊಂಡು ಅವರ ಹಿರಿತನ, ಅನುಭವವನ್ನು ಹೊಗಳುತ್ತಾರೆ. ಸೋಮವಾರವೂ ನಿಯೋಗದಲ್ಲಿದ್ದ ಮಾಜಿ ಪ್ರಧಾನಿ ದೇವೇಗೌಡರನ್ನು ಕಂಡು ತಮ್ಮ ಬಳಿಯೇ ಕೂರಿಸಿಕೊಂಡು ಮೋದಿ ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರು.
ರಾಜ್ಯಕ್ಕೆ ಶೀಘ್ರವೇ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಅವರು, ನಿಯೋಗದಲ್ಲಿದ್ದವರನ್ನು ಸೂಕ್ಷ್ಮವಾಗಿ ಗಮನಿಸಿ, 'ನಿಮ್ಮ ನಿಯೋಗದಲ್ಲಿ ನಿಮ್ಮ ಕುಟುಂಬ ಕುಟುಂಬದವರೇ ಅರ್ದದಷ್ಟು ಮಂದಿ ಇದ್ದಾರಲ್ಲವೇ ?' ಎಂದು ಸಿಎಂ ಕುಮಾರಸ್ವಾಮಿಯ ಕಾಲೆಳೆದರು. ಈ ನಿಯೋಗದಲ್ಲಿ ಮಾಜಿ ಪ್ರಧಾನಿ ದೇವೇಗೌಡ ,ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಎಚ್ .ಡಿ ರೇವಣ್ಣ, ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ಸಚಿವರಾದ ಆರ್. ವಿ ದೇಶಪಾಂಡೆ , ಡಿ.ಕೆ ಶಿವಕುಮಾರ್ , ಕೃಷ್ಣಬೈರೇಗೌಡ ಅವರನ್ನು ಒಳಗೊಂಡಿತ್ತು.