ಮಂಗಳೂರು, ಸೆ 11 (MSP): ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ಕಳ ಯುವಕ ಮತ್ತು ಅಮೆರಿಕದ ಯುವತಿ ಸತಿಪತಿಗಳಾದರು. ಅಮೆರಿಕಾದಲ್ಲಿ ವಾಸವಾಗಿರುವ ಟ್ಯಾಮ್ರ ಎಂಬ ಯುವತಿ ಕಾರ್ಕಳ ಅನಂತಶಯನದ ಸುಶಾಂತ್ ನಾಯಕ್ ಎಂಬವರನ್ನು ಪ್ರೀತಿಸುತ್ತಿದ್ದರು. ಕೆಲ ವರ್ಷದ ಹಿಂದೆ ಸುಶಾಂತ್ ಕೆಲಸದ ನಿಮಿತ್ತ ದೆಹಲಿಗೆ ತೆರಳಿದಾಗ ಟ್ಯಾಮ್ರ ಪರಿಚಯವಾಗಿದ್ದು, ನಂತರ ಅವರಿಬ್ಬರೂ ಮದುವೆಯ ನಿರ್ಧಾರಕ್ಕೆ ಬಂದಿದ್ದರು. ತಮ್ಮಿಬ್ಬರ ಪ್ರೀತಿಯನ್ನು ಟ್ಯಾಮ್ರ ಪಾಲಕರು ತಿಳಿಸಿದಾಗ ವಿವಾಹಕ್ಕೆ ಟ್ಯಾಮ್ರ ಪಾಲಕರು ಒಪ್ಪಿಗೆ ಸೂಚಿಸಿದರು. ಇದರಂತಯೇ ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ವಿವಾಹವಾದರು.
ಮದುವೆಗೆ ವರನ ಕಡೆಯವರು ಭಾಗಿಯಾಗಿದ್ದು, ವಧುವಿನ ತಂದೆ ತಾಯಿಗಳಿಗೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಟ್ಯಾಮ್ರ ಅಮೆರಿಕಾದ ಪ್ರತಿಷ್ಟಿತ ಖಾಸಗಿ ಕಂಪನಿಯಲ್ಲಿದ್ದು ಸುಶಾಂತ್ ನಾಯಕ್ ವಿಡಿಯೋ ಎಡಿಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಭಾರತದ ಸಂಸ್ಕೃತಿ ಸಂಸ್ಕಾರಕ್ಕೆ ಮನಸೋತು ಭಾರತದ ಯುವಕನನ್ನೇ ಮದುವೆಯಾಗಿರುವುದಾಗಿ ಟ್ಯಾಮ್ರ ತಿಳಿಸಿದ್ದಾರೆ.