ಮಂಗಳೂರು, ಏ. 2 (DaijiworldNews/SM): ನಗರದಲ್ಲಿ ಯುವಕ ಹಾಗೂ ಯುವತಿಗೆ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಬಾಬುಗುಡ್ಡೆ ನಿವಾಸಿ ಬಾಲಚಂದ್ರ(28), ಕಂದುಕ ನಿವಾಸಿ ಧನುಷ್ ಭಂಡಾರಿ(25), ಶಕ್ತಿನಗರ ನಿವಾಸಿ ಜಯಪ್ರಶಾಂತ್(27), ಮಾರಿಗುಡಿ ನಿವಾಸಿ ಅನೀಲ್ ಕುಮಾರ್(38) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇನ್ನು ಅಶ್ವಿನ್ ಶಾನುಬಾಗ್ ಹಾಗೂ ಅನ್ವರ್ ಮೊಹಮ್ಮದ್ ಎಂಬವರು ಹಲ್ಲೆಗೊಳಗಾದವರಾಗಿದ್ದಾರೆ. ಇವರು ಮಂಗಳೂರಿನಿಂದ ಬಸ್ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಕೊಲೆ ಯತ್ನ ಪ್ರಕರಣ ನಡೆದಿದೆ.