ಹಳೆಯಂಗಡಿ, ಏ.03 (DaijiworldNews/HR): ಹಳೆಯಂಗಡಿಯ ತೋಕೂರು ಎಂಬಲ್ಲಿ ಪತ್ನಿಯನ್ನೇ ಕತ್ತಿಯಿಂದ ಕಡಿದು ಪತಿರಾಯ ಪರಾರಿಯಾದ ಘಟನೆ ನಡೆದಿದೆ.

ಸಾಂಧರ್ಭಿಕ ಚಿತ್ರ
ಆರೋಪಿಯನ್ನು ಕುಳಾಯಿ ನಿವಾಸಿ ಮೋಹನ್ ಎಂದು ಗುರುತಿಸಲಾಗಿದೆ.
ಮೋಹನ್ ಅವರ ಪತ್ನಿ ಪ್ರಮೋದ (39) ಮೂಲ್ಕಿಯ ಬ್ಯಾಂಕೊಂದರಲ್ಲಿ ಅಟೆಂಡರ್ ಆಗಿದ್ದು, ಪ್ರಮೋದಾ ಅವರ ಸಹೋದರಿಯ ಮನೆಗೆ ಮೋಹನ್ ಏಕಾಏಕಿ ಬಂದು ಪ್ರಮೋದಾ ಅವರಿಗೆ ಅವಾಚ್ಯವಾಗಿ ನಿಂದಿಸಿ ಕತ್ತಿಯಿಂದ ಕಡಿದಿದ್ದು, ತಲೆಯ ಎಡ ಭಾಗಕ್ಕೆ ಗಾಯವಾಗಿತ್ತು. ಬಳಿಕ ಗಲಾಟೆ ತಡೆಯಲು ಬಂದ ಆಕೆಯ ತಾಯಿಯ ಮೇಲೂ ಹಲ್ಲೆ ನಡೆಸಿದ್ದು ಅವರ ಎಡಕೈಗೆ ಗಂಭೀರ ಗಾಯವಾಗಿದೆ.
ಇನ್ನು ಈ ಘಟನೆ ನಡೆದಾಗ ಮನೆಯವರು ಬೊಬ್ಬೆ ಹಾಕಿದಾಗ ಆರೋಪಿ ಮೋಹನ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದುದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಪ್ರಮೋದ ಅವರು ಮೂಲ್ಕಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಯನ್ನು ಸುರತ್ಕಲ್ ಖಾಸಗಿ ಆಸ್ಪತ್ರೆಯಲ್ಲಿ ಪದೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.