ಕುಂದಾಪುರ, ಏ 3(DaijiworldNews/MS): ಸೌದಿ ಅರೇಬಿಯಾದಲ್ಲಿ ವಾಹನ ಚಲಾಯಿಸುತ್ತಿರುವಾಗ ಹೃದಯಾಘಾತದಿಂದಾಗಿ ಕುಂದಾಪುರ ಸಮೀಪ ಖಾರ್ವಿಕೇರಿ ಮೇಲ್ ಕೇರಿ ನಿವಾಸಿ ದಿವಂಗತ ಪಾಂಡುರಂಗ ಸಾರಂಗ ಅವರ ಪುತ್ರ ನಾಗರಾಜ್ ಸರಂಗ (57) ಅವರು ಮೃತಪಟ್ಟಿದ್ದಾರೆ.

ನಾಗರಾಜ್ ಸರಂಗ ಅವರು ಲಿಜಮಾನ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಮಾರ್ಚ್ 29 ರಂದು ನಾಗರಾಜ ಅವರು ಕಂಪನಿಯ ವಾಹನವನ್ನು ಚಾಲನೆ ಮಾಡುತ್ತಿರುವಾಗ ವಾಹನದಲ್ಲಿಯೇ ಹೃದಯಾಘಾತ ಒಳಗಾಗಿದ್ದರು. ಪರಿಣಾಮ ವಾಹನದ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರ ಮೃತದೇಹವನ್ನು ಏಪ್ರಿಲ್ 3 ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕುಂದಾಪುರಕ್ಕೆ ತರಲಾಗುವುದು.ಮೃತರು ಪತ್ನಿಯನ್ನು ಅಗಲಿದ್ದಾರೆ.