ಮಲ್ಪೆ,ಏ.03 (DaijiworldNews/HR): ಮಹಿಳೆಯೊಬ್ಬರು ಕೃಷಿ ಕೆಲಸ ಮಾಡಿಕೊಂಡಿದ್ದು, ತೆಂಗಿನಕಟ್ಟೆಯಲ್ಲಿ ಹುಲ್ಲು ತೆಗೆಯುತ್ತಿದ್ದಾಗ ಬಲಕಾಲಿನ ಪಾದದ ಹಿಂಭಾಗಕ್ಕೆ ವಿಷಪೂರಿತ ಹಾವು ಕಚ್ಚಿ ಮೃತಪಟ್ಟ ಘಟನೆ ಮಲ್ಪೆಯ ಪಡುತೋನ್ಸೆ ಗ್ರಾಮದಲ್ಲಿ ನಡೆದಿದೆ.

ಸಾಂಧರ್ಭಿಕ ಚಿತ್ರ
ಮೃತಪಟ್ಟ ಮಹಿಳೆಯನ್ನು ಸಬಿತಾ(43) ಎಂದು ಗುರುತಿಸಲಾಗಿದೆ.
ಹಾವು ಕಚ್ಚಿದ ತಕ್ಷಣ ಗಾಯದ ಮೇಲ್ಭಾಗದಲ್ಲಿ ಬಿಗಿಯಾಗಿ ಬಟ್ಟೆ ಕಟ್ಟಿ ಕೂಡಲೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೀಸಿದ ವೈದ್ಯರು ಚಿಕಿತ್ಸೆ ನೀಡಿ ವಾರ್ಡಿಗೆ ಸ್ಥಳಾಂತರಿಸಿದ್ದು, ಬಳಿಕ 10 ನಿಮಿಷದಲ್ಲಿ ಸಬಿತಾರವರು 3 ಬಾರಿ ವಾಂತಿ ಮಾಡಿಕೊಂಡಿದ್ದು ನಂತರ ಊಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹಾಗಾಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ಬಳಿಕ ಕೂಡಲೇ ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ವೈದ್ಯಾಧಿಕಾರಿಯವರು ಚಿಕಿತ್ಸೆ ನೀಡಿದ್ದು ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.