ಉಡುಪಿ, ಎ.03 (DaijiworldNews/MB) : ಆಕಸ್ಮಿಕವಾಗಿ ಜಾರಿ ತೆರೆದ ಬಾವಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಏಪ್ರಿಲ್ 3 ರ ಶನಿವಾರ ಸಂಜೆ ಉಡುಪಿಯ ಕಾಪುವಿನ ಮುದರಂಗಡಿಯಲ್ಲಿ ನಡೆದಿದೆ.





ಮಗುವನ್ನು ಅದಮಾರಿನ ಜಯಲಕ್ಷ್ಮಿ ಮತ್ತು ಕೃಷ್ಣ ದಂಪತಿಗಳ ಪುತ್ರಿ ಪ್ರಿಯಾಂಕಾ ಎಂದು ಗುರುತಿಸಲಾಗಿದೆ.
ಶನಿವಾರ, ಕುಟುಂಬವು ನಗರದಲ್ಲಿ ಮಾರುಕಟ್ಟೆಗೆ ಬಂದಿದ್ದು ಈ ಸಂದರ್ಭ ಮಗು ಆಡುವಾಗ ಬಾವಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ. ಪೋಷಕರು ವಸ್ತುಗಳನ್ನು ಖರೀದಿ ಮಾಡುತ್ತಿದ್ದ ಅಂಗಡಿಯ ಬಳಿ ಬಾವಿ ಇತ್ತು.
ಮಗಳು ಕಾಣೆಯಾಗಿದ್ದಾಳೆಂದು ತಿಳಿದ ನಂತರ ತಾಯಿ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ಮಗುವಿನ ಪತ್ತೆ ಕಾರ್ಯ ಆರಂಭವಾಗಿದೆ. ಸ್ವಲ್ಪ ಸಮಯದ ನಂತರ, ಶಿರ್ವಾ ಪೊಲೀಸರು ಮತ್ತು ಸ್ಥಳೀಯರು ಬಾವಿಯ ಬಳಿ ಒಂದು ಚೀಲ ಮತ್ತು ಹೂವನ್ನು ನೋಡಿದರು. ಈ ಸಂದರ್ಭ ಬಾವಿಯಲ್ಲಿ ಮಗು ಬಿದ್ದಿರುವುದು ಕಂಡು ಬಂದಿದೆ.
ಈ ಬಗ್ಗೆ ಶಿರ್ವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.