ಕಾಸರಗೋಡು, ಎ.04 (DaijiworldNews/MB) : ಏಪ್ರಿಲ್ ಆರರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆಬೀಳಲಿದೆ. ಜಿಲ್ಲೆಯ ಐದು ಕ್ಷೇತ್ರಗಳಿಗೂ ಚುನಾವಣೆ ನಡೆಯುತ್ತಿದ್ದು, 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮಂಜೇಶ್ವರ, ಕಾಸರಗೋಡು ಮತ್ತು ಉದುಮ ಈ ಬಾರಿ ಕುತೂಹಲದ ಕ್ಷೇತ್ರಗಳಾಗಿವೆ. ಮಂಜೇಶ್ವರದಲ್ಲಿ ಯುಡಿಎಫ್-ಬಿಜೆಪಿ-ಎಲ್ಡಿಎಫ್ ನಡುವೆ ತ್ರಿಕೋನ ಸ್ಪರ್ಧೆ ಕಂಡುಬಂದರೆ ಕಾಸರಗೋಡಿನಲ್ಲಿ ಯುಡಿಎಫ್ ಮತ್ತು ಬಿಜೆಪಿ ಹಾಗೂ ಉದುಮದಲ್ಲಿ ಯುಡಿಎಫ್ ಮತ್ತು ಎಲ್ಡಿ ಎಫ್ ನಡುವಿನ ನೇರ ಹಣಾಹಣಿ ನಡೆಯುತ್ತಿದೆ. ಅಭ್ಯರ್ಥಿಗಳು ಅಂತಿಮ ಹಂತದ ಮತಯಾಚನೆಯಲ್ಲಿ ತೊಡಗಿದ್ದಾರೆ.
ಚುನಾವಣಾ ಪ್ರಚಾರದ ಅಂತಿಮ ಹಂತವಾದ ಜನಸಾಗರದಿಂದ ಕೂಡುವ ಅಬ್ಬರದ ಪ್ರಚಾರ 'ಕೊಟ್ಟಿ ಕಲಶಂ' ಗೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಕೋವಿಡ್ ಹಿನ್ನಲೆಯಲ್ಲಿ ಈ ನಿಯಂತ್ರಣ ತರಲಾಗಿದೆ. ಇದರಿಂದ ಜನಸಾಗರದಿಂದ ಕೂಡಿದ ಅಬ್ಬರದ ಪ್ರಚಾರಕ್ಕೆ ಆಯೋಗ ನಿರ್ಬಂಧ ಹೇರಿದೆ, ಇದರಿಂದ ಅಭ್ಯರ್ಥಿಗಳು ಮತದಾರರನ್ನು ನೇರವಾಗಿ ಭೇಟಿ ಮಾಡಿ ಮತಯಾಚನೆಯಲ್ಲಿ ತೊಡಗಿದ್ದಾರೆ.
ಕೊನೆಯ ಹಂತದಲ್ಲಿ ಮತದಾರರನ್ನು ಸೆಳೆಯಲು ಮೂರು ಪಕ್ಷಗಳು ಪ್ರಮುಖ ನಾಯಕರುಗಳನ್ನು ಪ್ರಚಾರಕ್ಕೆ ಕರೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಯುಡಿಎಫ್ ಪರ ಹಾಗೂ ಸ್ಮ್ರತಿ ಇರಾನಿ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ. ಎಲ್ಡಿಎಫ್ ಪರ ಬೃ೦ದ ಕಾರಟ್ ಸೇರಿದಂತೆ ಹಲವು ನಾಯಕರು ಅಂತಿಮ ಹಂತದಲ್ಲಿ ಪ್ರಚಾರಕ್ಕೆ ತಲಪಿದ್ದಾರೆ.