ಮಂಗಳೂರು, ಎ.04 (DaijiworldNews/PY): ಗುದನಾಳದಲ್ಲಿ ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಓರ್ವ ಪ್ರಯಾಣಿಕನನ್ನು ಮಂಗಳೂರು ವಿಮನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಕಾಸರಗೋಡು ಮೂಲದ ನೌಶಾದ್ ತ್ರಿಕ್ಕುಲಾಥ್ (37) ಎಂದು ಗುರುತಿಸಲಾಗಿದೆ.
ನೌಶಾದ್ ದುಬೈನಿಂದ ಬರುತ್ತಿದ್ದ ಏರ್ ಇಂಡಿಯಾ ಫ್ಲೈಟ್ ಐಎಕ್ಸ್ 384 ನಿಂದ ಬಂದಿಳಿದಿದ್ದು, ಗುದನಾಳದ ಮೂಲಕ ತನ್ನ ದೇಹದೊಳಗೆ ಅಡಗಿಸಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಬಂಧಿತನಿಂದ 37.29 ಲಕ್ಷ ರೂ.ಗಳ ಮೌಲ್ಯದ 802.000 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಅವಿನಾಶ್ ಕಿರಣ್ ರೊಂಗಾಲಿ, ರಾಕೇಶ್ ಹಾಗೂ ಆಶಿಶ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.