ಮಂಗಳೂರು, ಸೆ 12(MSP) : ಬೆಳ್ತಂಗಡಿಯಲ್ಲಿ ಪ್ರತಿಭಟನೆಯ ಸಂದರ್ಭ ಮನುಸ್ಮೃತಿಯನ್ನು ಸುಟ್ಟು ಹಾಕಲಾಗಿತ್ತು. ಆದರೆ ಹಿಂದೂ ಸಂಘಟನೆಗಳು ’ಭಗವಾಧ್ವಜ ’ ಸುಡಲಾಗಿದೆ ಎಂದು ಆರೋಪಿಸಿ ವಿವಿಧ ಠಾಣೆಗಳಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿದೆ.
ಈ ಬಗ್ಗೆ ನಗರದಲ್ಲಿ ಸೆ.11 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಅಂಬೇಡ್ಕರ್ ಫೋರಂ ಫಾರ್ ಸೋಶಿಯಲ್ ಜಸ್ಟೀಸ್ ಅಧ್ಯಕ್ಷ ಭಾನುಚಂದ್ರ ಕೃಷ್ಣಪುರ, ದಲಿತರು ಸಮಾಜದವರು ಮುಖ್ಯವಾಹಿನಿಗೆ ಬರುತ್ತಿರುವುದು ಸಂಘ ಪರಿವಾರಕ್ಕೆ ಸಹಿಸಲು ಅಸಾಧ್ಯವಾಗುತ್ತಿದೆ. ಆದ್ದರಿಂದ ಸುಳ್ಳು ದೂರೂ ದಾಖಲಿಸಿ ದಲಿತರನ್ನು ದಮನಿಸಲು ಯತ್ನಿಸಿಸುತ್ತಿವೆ.ಪವಿತ್ರವಾದ ಭಗವಾಧ್ವಜದ ಕುರಿತು ದಲಿತರಿಗೂ ಗೌರವವಿದೆ. ಸಂಘ ಪರಿವಾರದ ಕೇಸರಿ ಬಣ್ಣದ ಪೇಟೆಂಟ್ ಪಡೆದವರ ಹಾಗೆ ಮಾತನಾಡಬೇಕಿಲ್ಲ ಎಂದು ಕಿಡಿಕಾರಿದರು.