ಉಡುಪಿ, ಏ.04 (DaijiworldNews/HR): ಸದಾ ಕಚೇರಿ, ವಿಡಿಯೋ ಕಾನ್ಪರೆನ್ಸ್, ಸಭೆ ಸಮಾರಂಭ, ಸರಕಾರದ ಕಾರ್ಯಕ್ರಮಗಳು ಸಂವಾದದಲ್ಲಿ ಬ್ಯುಸಿಯಾಗಿರುವ ಉಡುಪಿ ಜಿಲ್ಲಾಧಿಕಾರಿ, ಬಹಳ ಆಸಕ್ತಿಯಿಂದ ಅಜ್ಜರಕಾಡಿನಲ್ಲಿ ತಾವು ವಾಸ್ತವ್ಯ ಇರುವ ಮನೆಯ ಸುತ್ತಲೂ ಸಾವಯವ ಸೊಪ್ಪು ತರಕಾರಿ ಬೆಳೆಸಿ ಇತರರಿಗೂ ಮಾದರಿಯಾಗಿದ್ದಾರೆ. ನಿವಾಸಕ್ಕೆ ಒಂದು ಸುತ್ತು ತಿರುಗಾಡಿ ಬಂದರೆ ಸಾಕು ಡಿಸಿ ಮತ್ತವರ ಪತ್ನಿಯವರ ಕೈಯಲ್ಲಿ ಅರಳಿದ ಹಸಿರು ಗಿಡಗಳು ನಿಮ್ಮನ್ನ ಆಕರ್ಷಿಸುತ್ತವೆ.









ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೃಷಿಕ ಕುಟುಂಬದಿಂದ ಬಂದಿರುವ ತಾವು ವರ್ಗಾವಣೆ ಆಗಿ ನೆಲೆಸಿರುವ ಕಡೆಯಲ್ಲೆಲ್ಲ ತರಕಾರಿ ಗಿಡಗಳನ್ನು ಬೆಳೆಸಿ ಕೈದೋಟ ಮಾಡುವುದು ಹವ್ಯಾಸ ಆಗಿಬಿಟ್ಟಿದ್ದು, ಕೇವಲ ತರಕಾರಿ ಅಲ್ಲದೆ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಸೀಬೆಕಾಯಿ,ಕೋಲಾರದಿಂದ ಮಾವಿನಗಿಡಗಳನ್ನು ತಂದು ನೆಟ್ಟಿದ್ದಾರೆ.
ಸದ್ಯ ತಮ್ಮ ಮನೆಗೆ ಬೇಕಾದ ತರಕಾರಿಯನ್ನು ತಾವೆ ಬೆಳೆಯುತ್ತಾರೆ, ಹೊರಗಡೆಯ ರಾಸಾಯನಿಕ ಸೊಪ್ಪು ತರಕಾರಿಗೆ ಅವಲಂಬಿಸದೆ ಸ್ವಾವಲಂಬಿಯಾಗಿದ್ದಾರೆ.
ಜಿ. ಜಗದೀಶ್ರವರು ಅನೇಕ ಕಾರ್ಯದೊತ್ತಡಗಳಲ್ಲಿದ್ದರೂ ಸಮಯ ಸಿಕ್ಕಾಗಲೆಲ್ಲ ತಮ್ಮ ಪತ್ನಿಯೊಂದಿಗೆ ಸೇರಿ ಗಿಡಗಳಗೆ ಗೊಬ್ಬರ ಹಾಕುವುದೋ, ನೀರುಣಿಸುವುದೋ, ಕಳೆ ಕೀಳುವುದೋ, ಹೀಗೆ ಹೀಗೆ ಕೈಯಲ್ಲಿ ಹಾರೆ ಪಿಕ್ಕಾಸಿ ಹಿಡಿದುಕೊಂಡು, ಪತ್ನಿ ಸೌಮ್ಯ ಅವರೊಂದಿಗೆ ಕೈದೋಟದ ಕೆಲಸದಲ್ಲಿ ತೊಡಗುತ್ತಾರೆ.
ಇತ್ತಿಚೆಗೆ ತೋಟಗಾರಿಕಾ ಇಲಾಖಾ ಅಧಿಕಾರಿಗಳು ಜೇನು ಕೃಷಿ ತಜ್ಞರಿಂದಲೇ ಮಾರ್ಗದರ್ಶನ ಪಡೆದುಕೊಡೇ ಜೇನು ಸಾಕಣೆ ಆರಂಭ ಮಾಡಿದ್ದಾರೆ. ಪೆಟ್ಟಿಗೆಯನ್ನಿಟ್ಟ್ರೆ ಪರಿಶುದ್ದವಾದ ಜೇನು ಪಡೆಯಬಹುದ ಎನ್ನುವ ಉದ್ದೇಶದಿಂದ ಈ ಕೆಲಸ ಮಾಡಲು ಮುಂದಾಗಿದ್ದಾರಂತೆ.
ತಾವೇ ಬೆಳೆಸಿದ ಗಿಡದಲ್ಲಿನ ತರಕಾರಿ ರುಚಿ ಹೆಚ್ಚಾಗಿರುತ್ತದೆ. ಒಂದು ಖುಷಿ ಕೊಡುತ್ತದೆ. ಪ್ರತಿದಿನ ಬೆಳಗ್ಗೆ ಹೆಚ್ಚು ಕಮ್ಮಿ ಅರ್ದಗಂಟೆ ತಾವು ಬೆಳೆಸಿದ ಕೈದೋಟದಲ್ಲಿ ತಿರುಗಾಡುವುದೇ ಒಂದು ರೀತಿಯ ಸಂತೋಷ ಕೊಡುತ್ತದೆ. ರಾತ್ರಿ ತಡವಾಗಿ ಬಂದರೂ ಲೈಟ್ ಹಿಡಿದು ಬಂದು ನೋಡುತ್ತೇನೆ. ಕೃಷಿ ಹಿನ್ನೆಲೆ ಮತ್ತು ಕೃಷಿಯ ಮೇಲಿನ ಆಸಕ್ತಿ ಇವನ್ನೆಲ್ಲ ಬೆಳೆಸಲು ಪ್ರೇರೆಪಿಸಿತು ಎಂದು ಜಿಲ್ಲಾಧಿಕಾರಿಯವರೇ ಹೇಳುತ್ತಾರೆ.