ಕಡಬ, ಸೆ 12(MSP) : ತಾಲೂಕಿನ ಅಲಂಕಾರು ಎಂಬಲ್ಲಿ ವ್ಯಕ್ತಿಯೋರ್ವ ತನ್ನ ಪುತ್ರನೊಂದಿಗೆ ಜಗಳವಾಡಿ ಹಲ್ಲೆ ನಡೆಸಿ ಬಳಿಕ ತನ್ನ ಮರ್ಮಾಂಗ ಮತ್ತು ಕುತ್ತಿಗೆಯನ್ನು ಕತ್ತರಿಸಿ ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಸೆ 12 ರ ಬುಧವಾರ ಬೆಳಗ್ಗೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಾತನನ್ನು ರಾಜು ಪೂಜಾರಿ (45) ಎಂದು ಗುರುತಿಸಲಾಗಿದೆ. ಈತ ಕೆಲ ಸಮಯದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಸುಮಾರು 8 .30 ರ ವೇಳೆಗೆ ತನ್ನ 20 ವರ್ಷದ ಪುತ್ರ ರತನ್ ಜತೆ ಜಗಳವಾಡಲು ಪ್ರಾರಂಭಿಸಿದ್ದಾನೆ. ಬಳಿಕ ಸಿಟ್ಟಿನಿಂದ ಆತನಿಗೆ ಕತ್ತಿಯಿಂದ ಕಡಿದ್ದಾನೆ. ಗಾಯಗೊಂಡ ರತನ್ ನನ್ನು ತಕ್ಷಣ ಆತನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತ ಕಡೆ ಪುತ್ರನ ಮೇಲೆ ಹಲ್ಲೆ ನಡೆಸಿದ ರಾಜು ಪೂಜಾರಿ ತನ್ನ ಮರ್ಮಾಂಗ ಮತ್ತು ಕುತ್ತಿಗೆಯನ್ನು ಕೊಯ್ದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಚೆ ಆಸ್ಭತ್ರೆಗೆ ಸಾಗಿಸಲಾಗಿದೆ. ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದು , ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.