ಕಡಬ, ಅ 5: ಯುವತಿಯೋರ್ವಳು ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಅರಜ್ಜಿಗೆಯಲ್ಲಿ ನಡೆದಿದೆ. ವಿವಾಹ ನೆಂಟಸ್ತಿಕೆ ಹೊಂದಾಣಿಕೆಯಾಗ ನೆಪವೊಡ್ಡಿ ಸಾವಿಗೆ ಶರಣಾದ ಯುವತಿಯನ್ನು ಸೌಮ್ಯ ಎಂದು ಗುರುತಿಸಲಾಗಿದೆ. ಹಳೆನೇರಂಕಿ ಗ್ರಾಮದ ಅರಜ್ಜಿಗೆ ನಿವಾಸಿ ಕೃಷ್ಣಪ್ಪ ಪೂಜಾರಿಯ ಪುತ್ರಿಯಾಗಿರುವ ಸೌಮ್ಯ ಹಲವು ನೆಂಟಸ್ಥಿಕೆಗಳು ಬಂದಿದ್ದರೂ ಯಾವುದೂ ಕೂಡಿಬರದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು. ಈ ಹಿನ್ನಲೆಯಲ್ಲಿ ಬುಧವಾರ ಆಸಿಡ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.