ಉಡುಪಿ, ಏ. 5 (DaijiworldNews/SM): ಪಡುಬಿದ್ರಿಯ ಮುಖ್ಯ ಬೀಚ್ ನಲ್ಲಿ ಮೂಲಸೌಕರ್ಯವಿಲ್ಲ, ಶೌಚಾಲಯವೂ ಇಲ್ಲ. ಎರಡು ಮೂರು ತಿಂಗಳ ಹಿಂದೆ ಸಮಸ್ಯೆ ಹೇಳಿದರೂ ಯಾರು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದರಿಂದಾಗಿ ಪ್ರವಾಸಿಗರು ಸಮಸ್ಯೆ ಎದುರಿಸುವಂತಾಗಿದೆ ಎಂದು ಶಶಿಕಾಂತ್ ಪಡುಬಿದ್ರೆಯವರು ಆರೋಪಿಸಿದ್ದಾರೆ.

ಅವರು ಸೋಮವಾರ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ನ 25ನೇ ಮತ್ತು ಅವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಇದರ ಬಗ್ಗೆ ಜಿಲ್ಲಾ ಪ್ರವಾಸಿಗರ ಅಭಿವೃದ್ಧಿ ಸಮಿತಿಯ ಅಧಿಕಾರಿ ಮಾತನಾಡಿ, 'ಹಿಂದೆ ಒಂದು ಸಂಸ್ಥೆಯವರು ಸ್ವಚ್ಛತೆಯನ್ನು ನಿರ್ವಹಿಸುತ್ತಿದ್ದರು. ಅದು ನಿರ್ವಹಿಸದಿದ್ದರೆ ಮುಂದೆ ಜಿಲ್ಲಾ ಸಮಿತಿಯಿಂದಲೇ ಬೀಚ್ ನ ನಿರ್ವಹಣೆ ಮಾಡುತ್ತೇವೆ ಎಂದರು.