ಕಾಸರಗೋಡು, ಏ. 06 (DaijiworldNews/HR): ಕೇರಳ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮೊದಲ ಗಂಟೆಗಳಲ್ಲಿ ಉತ್ತಮ ಮತದಾನವಾಗಿದೆ.








ಬೆಳಿಗ್ಗೆಯಿಂದಲೇ ಮತಗಟ್ಟೆಗಟ್ಟೆಗಳಲ್ಲಿ ಸರದಿ ಸಾಲು ಕಂಡುಬಂದಿದ್ದು, ಜಿಲ್ಲೆಯ 1,691 ಮತಗಟ್ಟೆಗಳಲ್ಲಿ 10.59 ಲಕ್ಷ ಮತದಾರರಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳಲ್ಲಿ 38 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, 10:15ರ ತನಕ ಜಿಲ್ಲೆಯಲ್ಲಿ 22.28 ಶೇಕಡಾ ಮತದಾನವಾಗಿದ್ದು, ಮಂಜೇಶ್ವರದಲ್ಲಿ 22.74%, ಕಾಸರಗೋಡು 20.06%, ಉದುಮ 22.24%, ಕಾಞಂಗಾಡ್ 23.09 %, ತೃಕ್ಕರಿಪುರ 23.14% ಮತದಾನವಾಗಿದೆ.
ಕಾಞಂಗಾಡ್ನ ಸಿಪಿಐ ಅಭ್ಯರ್ಥಿ ಇ. ಚಂದ್ರಶೇಖರನ್ ಕೋಳಿಯಡ್ಕ ಸರಕಾರಿ ಯು.ಪಿ ಶಾಲೆಯ 33 ನೇ ಮತಗಟ್ಟೆಯಲ್ಲಿ ಬೆಳಿಗ್ಗೆ ಮತ ಚಲಾಯಿಸಿದ್ದು, ಕಾಸರಗೋಡು ಯುಡಿಎಫ್ ಅಭ್ಯರ್ಥಿ ಎನ್. ಎ ನೆಲ್ಲಿಕುನ್ನುರವರು ನೆಲ್ಲಿಕುಂಜೆ ಸರಕಾರಿ ಹಯರ್ ಸೆಕಂಡರಿ ಶಾಲಾ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಕಾಸರಗೋಡು ಬಿಜೆಪಿ ಅಭ್ಯರ್ಥಿ ಕೆ. ಶ್ರೀಕಾಂತ್ ಬೇಕಲ ಸರಕಾರಿ ಫಿಷರೀಶ್ ಹೈಸ್ಕೂಲ್ನ 105 ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದು, ಎಲ್ಡಿಎಫ್ ಅಭ್ಯರ್ಥಿ ಎಂ.ಎ ಲತೀಫ್ ಪಳ್ಳಿಕೆರೆ ಕಲ್ಲಿಂಗಾಳ್ ಸರಕಾರಿ ಮಾಪಿಳ್ಳ ಯು.ಪಿ ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಉದುಮದ ಎಲ್ಡಿಎಫ್ ಅಭ್ಯರ್ಥಿ ಸಿ.ಎಚ್ ಕುಞಂಬು ಅಣಂಗೂರು ಜಿಎಲ್ಪಿ ಶಾಲಾ 156 ನೇ ಮತಗಟ್ಟೆಯಲ್ಲಿ ಬೆಳಿಗ್ಗೆ ತಮ್ಮ ಹಕ್ಕು ಚಲಾಯಿಸಿದ್ದು, ಮಂಜೇಶ್ವರ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಕಡಂಬಾರು ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.