ಮಂಗಳೂರು, ಎ.06 (DaijiworldNews/MB) : ಏಪ್ರಿಲ್ 6 ರ ಮಂಗಳವಾರ ನದಿ ತೀರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಇಲ್ಲಿನ ಪಾಂಡೇಶ್ವರದ ಹೊಯ್ಗೆ ಬಜಾರ್ನ ಕೆಎಎಫ್ಸಿ ಬಳಿಯ ನದಿಯ ದಡದಲ್ಲಿ ಶವ ಪತ್ತೆಯಾಗಿದೆ.
ಮೃತ ಪುರುಷನ ವಯಸ್ಸು ಸುಮಾರು 45 ವರ್ಷಗಳು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.
ಇಲ್ಲಿನ ಪಾಂಡೇಶ್ವರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.