ಮಂಗಳೂರು, ಏ. 06 (DaijiworldNews/HR): ತುಳುನಾಡಿನ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಟೈಮ್ಸ್ ಆಫ್ ಕುಡ್ಲ ಮತ್ತು ಜೈ ತುಳುನಾಡ್ (ರಿ) ಜಂಟಿ ಆಶ್ರಯದಲ್ಲಿ ತುಳುನಾಡ ದುನಿಪು ರಿಜಿಸ್ಟರ್ಡ್ ಪೋಸ್ಟ್ ಅಭಿಯಾನ ಕಾರ್ಯಕ್ರಮವು ಮಂಗಳೂರಿನ ಸೂರ್ಯ ಹೋಟೆಲ್ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಆಳುಪ ಅರಸರ ವಂಶಸ್ಥರಾದ ಡಾ. ಆಕಾಶ್ ರಾಜ್ ಜೈನ್, "ಆರ್ಟಿಕಲ್ 344(1) ಹಾಗು 351 ವಿದಿಯ ಪ್ರಕಾರ ಹಿಂದಿಯ ಜೊತೆ ಭಾರತದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಬಾಕಿ ಬಾಷೆಗಳಿಗು ಸ್ಥಾನ ಮಾನ ಕೊಡುವ ಅವಕಾಶ ಇದೆ ಆಗಾಗಿ ಇದರಲ್ಲಿ ನಮ್ಮ ತುಳು ಮಣ್ಣಿನ ಭಾಷೆಯಾದ ತುಳುವು ವಂಚಿತವಾಗಿದೆ ಆದುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನವನ್ನು ತುಳು ಬಾಷೆಯ ಮೇಲೆ ಸೆಳೆಯಲು ರಿಜಿಸ್ಟರ್ಡ್ ಪೋಸ್ಟ್ ಅಭಿಯಾನ ಕಾರ್ಯಕ್ರಮ ಅನಿವಾರ್ಯ ಆಗಿದೆ ಎಂದು ಹೇಳಿದರು.
ತುಳು ಸಿನಿಮಾ ನಟ ಬೋಜಾರಾಜ್ ವಾಮಂಜೂರು ರಿಜಿಸ್ಟರ್ಡ್ ಪೋಸ್ಟ್ ಅಭಿಯಾನಕ್ಕೆ ಚಾಲನೆ ನೀಡಿ ಬಳಿಕ ಮಾತನಾದಿದ ಅವರು, "ತಾನೇ ಸ್ವತಃ ತುಳು 8ನೇ ಪರೀಚೆದಕ್ಕೆ ಸೇರುವುದಕ್ಕೆ ಹಾಗೂ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಲು ವಿನಂತಿ ಮಾಡಿರುವ ಪತ್ರಿಕೆಗೆ ಸಹಿ ಹಾಕಿ ಎಲ್ಲರ ಗಮನ ಸೆಳೆದರು ತುಳುವರ ಮನಸು ದೊಡ್ಡದು ಲಾಕ್ ಡೌನ್ ಆಗಿ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದ ಸಂದರ್ಭದಲ್ಲಿ ನಾಟಕ ಸಿನಿಮಾ ನೋಡುವ ಮೂಲಕ ತುಳುಕಲಾವಿದರನ್ನು ಪ್ರೋತ್ಸಾಹಿಸ್ಸುತ್ತಾ ಇದ್ದರೆ ಇದರಿಂದ ಊರಿನಲ್ಲಿರುವ ಎಲ್ಲಾ ವರ್ಗದ ಜನರಿಗೆ ತುಳು ಬಾಷೆಯ ಮೇಲೆ ಇರುವ ಪ್ರೀತಿ ಗೊತ್ತಾಗುತ್ತದೆ ಇಂತಾ ಜನಪ್ರೀತಿ ಇರುವ ಭಾಷೆಯು 8 ನೇ ಪರೀಚ್ಚೆದಕ್ಕೆ ಸೇರಬೇಕು ಇದು ನಮ್ಮೆಲ್ಲರ ಒಕ್ಕೊರಲಿನ ಕೂಗು ಎಂದು ಹೇಳಿದರು.
ತುಳು ವಿದ್ವಾಂಸ ಉಡುಪಿ ಸಿರಿ ತುಳು ಚಾವಡಿ ಕೂಟದ ಅಧ್ಯಕ್ಷರಾದ ಕುದಿ ವಸಂತ ಶೆಟ್ಟಿ ಮಾತನಾಡಿ, "ತುಳುವರು ತುಳು ಪೆಲಕಾಯಿಯ ಹಾಗೆ ಮೆದು ಸ್ವಭಾವದವರಾಗಿದ್ದು ಸಾಕು ತುಳುವಿನ ಚೈತನ್ಯಕಾಗಿ ಎಲ್ಲ ಒಟ್ಟಾಗಿ ಸ್ವರ ಸೇರಿಸೋಣ ಎಂದು ಹೇಳಿದರು.
ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಡಾ ಶೇಕರ್ ಅಜೆಕಾರು, ಸೂರ್ಯ ಹೋಟೆಲಿನ ಮಾಲಕ ತಾರಾನಾಥ್ ಶೆಟ್ಟಿ, ಸೃಷ್ಠಿ ಕಲಾಭೂಮಿ ಬೆಂಗಳೂರು ಇದರ ಅಧ್ಯಕ್ಷ ಮಂಜುನಾಥ ಅಡಪ್ಪ, ತುಳುವೆರೆ ಅಯಾನೋ ಕೂಟ ದ ಅಧ್ಯಕ್ಷ ಡಾ ರಾಜೇಶ್ ಆಳ್ವ, ತುಳು ಸಿನೇಮಾ ನಿರ್ಮಾಪಕ ರವಿ ಬೋಳೂರು, ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್, ಟೈಮ್ಸ್ ಆಫ್ ಕುಡ್ಲದ ಜನರಲ್ ಮ್ಯಾನೇಜರ್ ಯಶೋದ ಕೇಶವ್, ಮ್ಯಾನೇಜರ್ ಕ್ರಿ ಶನ್ ತಿಮ್ಮಯ್ಯ, ಸಹ ಸಂಪಾದಕ ಯಶೋಧರ ಕೋಟ್ಯಾನ್, ಜೈ ತುಳುನಾಡು ಸಂಘಟನೆಯ ಸಂಘಟನಾ ಪ್ರಮುಕ ಕಿರಣ್ ತುಳುವ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.