ಕಾಸರಗೋಡು, ಏ.07 (DaijiworldNews/SM): ವಿಧಾನಸಭೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 74.68ಶೇಕಡಾ ಮತದಾನವಾಗಿದೆ. ತ್ರಿಕೋನ ಸ್ಪರ್ಧೆ ನಡೆಯುತ್ತಿರುವ ಮಂಜೇಶ್ವರದಲ್ಲಿ ಅತ್ಯಧಿಕ 76.66 ಶೇಕಡಾ ದಾಖಲೆಯ ಮತದಾನವಾಗಿದೆ.

ಕಾಸರಗೋಡಿನಲ್ಲಿ 70.62, ಉದುಮ 75.31, ಕಾಞ0ಗಾಡ್ ನಲ್ಲಿ 74.13 ಹಾಗೂ ತ್ರಿಕ್ಕರಿಪುರದಲ್ಲಿ 76.52 ಶೇಕಡಾ ಮತದಾನವಾಗಿದೆ. 2016ಕ್ಕೆ ಹೋಲಿಸಿದರೆ ಮಂಜೇಶ್ವರದಲ್ಲಿ 2016ರಲ್ಲಿ 76.38 ಶೇಕಡಾ ಮತದಾನವಾಗಿತ್ತು. ಕಾಸರಗೋಡಿನಲ್ಲಿ 76.62, ಉದುಮದಲ್ಲಿ 80.48, ಕಾಂಞ0ಗಾಡ್ 76.66 ಹಾಗೂ ತೃಕ್ಕರಿಪುರದಲ್ಲಿ 81.88 ಶೇಕಡಾ ಮತದಾನವಾಗಿತ್ತು.
ಜಿಲ್ಲೆಯಾದ್ಯಂತ ಮತದಾನ ಶಾಂತಿಯುತವಾಗಿತ್ತು. ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.