ಉಡುಪಿ, ಎ.06 (DaijiworldNews/PY): ಕೆಎಸ್ಆರ್ಟಿಸಿ ನೌಕರರ ಮುಷ್ಕರ ಉಡುಪಿ ಜಿಲ್ಲೆಯಲ್ಲಿ ಕಂಡುಬಂದಿದೆ.





ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಖಾಸಗಿ ಬಸ್ಗಳ ಮೊರೆ ಹೋಗಿದ್ದು, ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ.
ಬೆಂಗಳೂರು, ಮೈಸೂರು, ಹುಬ್ಬಳಿಗೆ ತೆರಳಿರುವ ಬಸ್ಗಳು ಒಂದು ಡಿಪೋಗೆ ವಾಪಸ್ಸಾಗಲಿವೆಇನ್ನು ಉಡುಪಿ ಡಿಪೋದಲ್ಲಿ 108 ಬಸ್ಗಳಿವೆ. 24 ಬಸ್ಗಳು ಬೆಳಗಾವಿ, ಬಾಗಲಕೋಟೆ, ಮೈಸೂರು, ಹುಬ್ಬಳ್ಳಿ, ಚಾಮರಾಜನಗರ, ಚಿಕ್ಕಮಗಳೂರು, ಇಂಡಿ, ಜಮಖಂಡಿ, ಶಿವಮೊಗ್ಗ ಹಾಗೂ ಬೆಂಗಳೂರಿಗೆ ತೆರಳಿವೆ. ಮಧ್ಯಾಹ್ನದ ಒಳಗೆ ಬಸ್ಗಳು ಡಿಪೋಗೆ ವಾಪಸ್ಸಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಮುಷ್ಕರ ಹಿನ್ನೆಲೆ ನೌಕರರಿ ಬಸ್ಗಳನ್ನು ಡಿಪೋದಲ್ಲಿ ನಿಲ್ಲಿಸಿದ್ದಾರೆ. ಉಡುಪಿ ಡಿಪೋದಿಂದ ಪ್ರತಿದಿನ 55 ಬಸ್ಗಳು ಸಂಚಾರಿಸುತ್ತಿದ್ದು, ಕುಂದಾಪುರದಿಂದ 55 ಬಸ್ಗಳು ಕಾರ್ಯಚರಿಸುತ್ತಿದ್ದವು. ನೌಕರರ ಮುಷ್ಕರದ ಹಿನ್ನೆಲೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.
ಕೆಎಸ್ಆರ್ಟಿ ಬಸ್ಗಳ ಸಂಚಾರ ಸ್ಥಗಿತಗೊಂಡ ಕಾರಣ, ಖಾಲಿ ರೂಟ್ಗಳಲ್ಲಿ ಬಸ್ ಓಡಿಸಲು ಖಾಸಗಿಯವರು ತಯಾರಿ ನಡೆಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಡಿಪೋದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.