ಮಂಗಳೂರು, ಎ.07 (DaijiworldNews/MB) : ಬೆಂದೂರು ಚರ್ಚ್ನ ಕಚೇರಿ ಮತ್ತು ಪಾದ್ರಿಯ ಕೋಣೆಯಿಂದ ಏಪ್ರಿಲ್ 5 ರಂದು ಲಕ್ಷಾಂತರ ರೂಪಾಯಿ ಹಣ ಎಗರಿಸಿದ ಮಾಸ್ಕ್ ಹಾಕಿರುವ ಕಳ್ಳನ ಮುಖವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪರಿಚಿತ ವ್ಯಕ್ತಿಯೋರ್ವ ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್ನ ಕಚೇರಿಗೆ ಕನ್ನ ಹಾಕಿ ಟೇಬಲ್ನ ಡ್ರಾಯರ್ನಲ್ಲಿ ಇಡಲಾಗಿದ್ದ 4,98,605 ರೂ. ಮತ್ತು 50,000 ಗ್ರಾಂ ಮೌಲ್ಯದ 12 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿದ್ದಾನೆ ಎಂದು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪಾದ್ರಿ ಬೆಳಿಗ್ಗೆ 6.30 ಕ್ಕೆ ಚರ್ಚ್ನಲ್ಲಿ ಸಾಮೂಹಿಕ ಪ್ರಾಥನೆಗೆ ತೆರಳಬೇಕಿತ್ತು. ಹೀಗಾಗಿ ಅವಸರದಲ್ಲಿ ಹೊರಟ ಅವರು ಕಚೇರಿಯ ಬಾಗಿಲಿಗೆ ಬೀಗ ಹಾಕಲು ಮರೆತಿದ್ದರು. ಈ ಸಂದರ್ಭ ಈ ಘಟನೆ ನಡೆದಿದೆ.
ಈ ಕೃತ್ಯ ಎಸಗಿದ ವ್ಯಕ್ತಿಯು ಹಿಂದಿನ ದಿನವೂ ಬಂದಿದ್ದನು. ಕಚೇರಿಯಲ್ಲಿನ ಚಟುವಟಿಕೆಗಳನ್ನು ಗಮನಿಸುತ್ತಿದ್ದನು. ಪಾದ್ರಿ ದುರದೃಷ್ಟವಶಾತ್ ಬೆಳಿಗ್ಗೆ ಕಚೇರಿಯ ಬಾಗಿಲಿಗೆ ಬೀಗ ಹಾಕಿಲ್ಲ. ಆದರೆ ಬೀರುವಿನ ಕೀಲಿ ಹೊಂದಿದ್ದ ಲಾಕರ್ನ್ನು ಅವರು ಲಾಕ್ ಮಾಡಿದ್ದರು. ಅಪರಾಧಿ ಕಚೇರಿಗೆ ಬಂದು ಆ ಲಾಕರ್ ಅನ್ನು ತೆರೆದು ಅದರಲ್ಲಿದ್ದ ಕೀಲಿಗಳನ್ನು ಹೊರತೆಗೆದು ನಂತರ ಬೀರು ತೆರೆದು ಅದರಲ್ಲಿದ್ದ ಹಣವನ್ನು ಹಾಗೂ ದೀಕ್ಷೆಯ ಸಂದರ್ಭ ಪಾದ್ರಿಯವರ ತಾಯಿ ಪಾದ್ರಿಗೆ ನೀಡಿದ್ದ ಚಿನ್ನದ ಸರವನ್ನು ಕದ್ದಿದ್ದಾನೆ ಎಂದು ಚರ್ಚ್ನ ಮೂಲವೊಂದು ತಿಳಿಸಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ಯಾರಿಷ್ ಪಾದ್ರಿ ಪ್ರಾರ್ಥನೆಗಾಗಿ ಹೋಗಿದ್ದ ಸಂದರ್ಭ ಮಾಸ್ಕ್ ಧರಿಸಿದ ವ್ಯಕ್ತಿ ನಗದು ಹಾಗೂ ಚಿನ್ನ ಕಳ್ಳತನ ಮಾಡಿದ್ದಾನೆ. ಈ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.