ಕಾಸರಗೋಡು, ಎ.07 (DaijiworldNews/MB) : ಏಪ್ರಿಲ್ 7 ರ ಮಂಗಳವಾರ ತಡರಾತ್ರಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಶ್ರೀಜಿತ್ ಪರಕ್ಲಾಯಿ ಮೇಲೆ ಅಪರಿಚಿತ ಗ್ಯಾಂಗ್ ಒಂದು ಶಸ್ತ್ರಾಸ್ತ್ರಗಳಿಂದ ಗಂಭೀರ ಹಲ್ಲೆ ನಡೆಸಿರುವ ಘಟನೆ ಅಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಪಾರಕ್ಲಾಯಿಯಲ್ಲಿ ನಡೆದಿದೆ.

ಶ್ರೀಜಿತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಶ್ರೀಜಿತ್ ಮೇಲೆ ಹಲ್ಲೆ ಮಾಡಿದ ಗ್ಯಾಂಗ್ ಹಲ್ಲೆಯ ನಂತರ ಪರಾರಿಯಾಗಿದೆ.
ಗ್ಯಾಂಗ್ನ ಹಲ್ಲೆಯಿಂದಾಗಿ ಶ್ರೀಜಿತ್ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದರಿಂದ, ಶ್ರೀಜಿತ್ ಅವರಿಗೆ ಬುಧವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಈ ದಾಳಿಯಲ್ಲಿ ಸಿಪಿಎಂ ಭಾಗಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಅಬಲತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.