ಮಂಗಳೂರು, ಏ. 07 (DaijiworldNews/SM): ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ವಿಶ್ವದಾದ್ಯಂತ ನೆಲೆಸಿರುವ ಬ್ಯಾರಿ ಭಾಷಿಕ ಸಂಘಟನೆಗಳ ಸಹಕಾರದಲ್ಲಿ "ವಿಶ್ವ ಬ್ಯಾರಿ ಸಮ್ಮೇಳನ 2021" ಅನ್ನು ದುಬೈ(ಯುಎಇ)ಯಲ್ಲಿ ನವಂಬರ್ ತಿಂಗಳಲ್ಲಿ ನಡೆಸುತ್ತೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಾರಿಯ ಬ್ಯಾರಿ ಸಾಹಿತ್ಯ ಸಮ್ಮೇಳನವನ್ನು ವಿಶ್ವದಲ್ಲಿರುವ ನಾನ ದೇಶದ ಬ್ಯಾರಿ ಸಂಘಟನೆಗಳ ಪ್ರಮುಖರು, ಪ್ರತಿನಿಧಿಗಳು, ಬ್ಯಾರಿ ಆಂದೋಲನದ ರುವಾರಿಗಳನ್ನು ಒಳಗೊಂಡ ಭಾರತದ ಬೇರೆ ಬೇರೆ ರಾಜ್ಯಗಳ, ಕರ್ನಾಟಕ ರಾಜ್ಯದ ಬ್ಯಾರಿ ಭಾಷಿಕರ ಬಾಹುಳ್ಯವಿರುವ ಜಿಲ್ಲೆಗಳ ಪ್ರಮುಖರನ್ನೊಳಗೊಂಡ ಸಮಿತಿಯು ರಚನೆಯಾಗಲಿದೆ ಮಾತ್ರವಲ್ಲದೆ ಸರಕಾರಕ್ಕೆ ಹೊರೆಯಾಗದಂತೆ ಖಾಸಗಿ ಸಂಘಟನೆಗಳ ಸಹಯೋಗದಲ್ಲಿ ಈ ಸಮ್ಮೇಳನವನ್ನು ನಡೆಸಲಾಗುತ್ತದೆ.
ಇನ್ನೂ ಈ ಕಾರ್ಯಕ್ರಮದಲ್ಲಿ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ, ಪುರಸ್ಕಾರ ಪ್ರದಾನ, ಸಾಧಕರಿಗೆ ಸನ್ಮಾನ, ವಿವಿಧ ಗೋಷ್ಠಿಗಳು, ಸಾಂಸ್ಕಂತಿಕ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು ಸೇರಿದಂತೆ ವಿಶ್ವದಾದ್ಯಂತವಿರುವ ಬ್ಯಾರಿ ಬಾಷಿಕರ ಸಾಮಾಜಿಕ, ಶೈಕ್ಷಣಿಕ, ನಿರುದ್ಯೋಗ, ಆರೋಗ್ಯ ಮುಂತಾದ ಸಮಸ್ಯೆಗಳಿಗೆ ಒಂದೆಡೆ ಸೇರಿ ಪರಿಹಾರ ಕಂಡುಕೊಳ್ಳುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸೂಕ್ತ ಬೇಡಿಕೆಯನ್ನು ಸಲ್ಲಿಸಲಾಗುತ್ತೆ ಎಂದವರು ತಿಳಿಸಿದ್ದಾರೆ.