ಕಾಸರಗೋಡು, ಏ. 07 (DaijiworldNews/SM): ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಿಯಂತ್ರಣಗಳನ್ನು ಮತ್ತಷ್ಟು ಬಿಗಿಗೊಳಿಸಲು ಕೇರಳ ಸರಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ ಕೋವಿಡ್ ನ ಎರಡನೇ ಅಲೆ ಕಂಡುಬಂದಿರುವ ಹಿನ್ನಲೆಯಲ್ಲಿ ನಿಯಂತ್ರಣ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

ನಾಳೆಯಿಂದ ತಪಾಸಣೆ ತೀವ್ರಗೊಳಿಸಲಾಗುವುದು. ಮಾಸ್ಕ್, ಸಾಮಾಜಿಕ ಅಂತರ ಮೊದಲಾದವುಗಳನ್ನು ಪಾಲಿಸಲಾಗುತ್ತಿದೆ ಎಂಬ ಬಗ್ಗೆ ಖಾತರಿಪಡಿಸಲು ತಪಾಸಣೆ ತೀವ್ರಗೊಳಿಸಲು ಕೋವಿಡ್ ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡವರು, ಮತಗಟ್ಟೆ ಏಜಂಟ್ ಗಳಾಗಿದ್ದವರು ತಪಾಸಣೆ ನಡೆಸಬೇಕು.
ಹೊರ ರಾಜ್ಯಗಳಿಂದ ಬರುವವರು ಏಳು ದಿನಗಳ ಕ್ವಾರಂಟೈನ್ ಗೆ ತೆರಳಬೇಕು ಎಂದು ತಿಳಿಸಲಾಗಿದೆ.