ಕಾಸರಗೋಡು, ಏ. 07 (DaijiworldNews/SM): ಯೂತ್ ಲೀಗ್ ಕಾರ್ಯಕರ್ತ ಮನ್ಸೂರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಮೃತದೇಹದ ಅಂತಿಮಯಾತ್ರೆ ಸಂದರ್ಭದಲ್ಲಿ ಪಾನೂರು ಪರಿಸರದ ಸಿಪಿಎಂ ಕಚೇರಿ ಮೇಲೆ ದಾಳಿ ನಡೆದಿದೆ. ಸಿಪಿಎಂ ಕಚೇರಿಗಳಿಗೆ ಮುಸ್ಲಿಂ ಲೀಗ್ ಕಾರ್ಯಕ ಕರ್ತರು ಬೆಂಕಿ ಹಚ್ಚಿದ್ದಾರೆ.

ಅಲ್ಲದೆ, ಹಲವೆಡೆ ಕಲ್ಲೆಸೆತ ನಡೆದ ಬಗ್ಗೆ ವರದಿಯಾಗಿದೆ. ಕಡವತ್ತೂರು, ಕಿಯಮಾಡ,ಕೂವತ್ತೂರು ಮೊದಲಾದೆಡೆ ಸಿಪಿಎಂ ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. ಮನ್ಸೂರ್ ನ ಮೃತದೇಹ ಕೋಜಿಕ್ಕೋಡ್ ನಿಂದ ಕಣ್ಣೂರಿಗೆ ಅಂತಿಮ ಯಾತ್ರೆ ನಡೆಸಲಾಗುತ್ತಿತ್ತು. ಇನ್ನು ಈ ಸಂದರ್ಭದಲ್ಲಿ ಉದ್ರಿಕ್ತರ ತಂಡ ದಿಂದ ಕೃತ್ಯ ನಡೆಸಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.