ಕಡಬ, ಏ 8 (DaijiworldNews/MS): ದ್ವಿಚಕ್ರ ವಾಹನವೊಂದು ಸವಾರನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೊಯಿಲ ಎಂಬಲ್ಲಿ ಏ.8 ಗುರುವಾರದಂದು ನಡೆದಿದೆ.

ಮೃತ ಸವಾರನನ್ನು ಕಡಬ ತಾಲೂಕಿನ ನೆಕ್ಕಿತ್ತಡ್ಕ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಖಲೀಲ್ ಎಂದು ಗುರುತಿಸಲಾಗಿದೆ. ಖಲೀಲ್ ಅವರು ತನ್ನ ಸ್ನೇಹಿತನ ದ್ವಿಚಕ್ರ ವಾಹನದಲ್ಲಿ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದಾಗ ಕೊಯಿಲ ಎಂಬಲ್ಲಿ ಚರಂಡಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಮೃತದೇಹವನ್ನು ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.