ಮಂಗಳೂರು, ಎ.08 (DaijiworldNews/MB) : ದೇಶದ ಅತಿ ದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಚೇನ್ ಆಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರಿನಲ್ಲಿ ತನ್ನ ಸ್ಥಳಾಂತರಗೊಂಡ ನವೀಕೃತ ಶೋರೂಂನ್ನು ಏಪ್ರಿಲ್ 8, 2021 ರಂದು ಉದ್ಘಾಟಿಸಿದರು. ಕರುಣ ಪ್ರೈಡ್, ಫಳ್ನೀರ್ ರಸ್ತೆಯಲ್ಲಿರುವ ಈ ಶೋರೂಂನ್ನು ಮಲಬಾರ್ ಗ್ರೊಪ್ನ ಅಧ್ಯಕ್ಷರಾದ ಎಂಪಿ ಅಹ್ಮದ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಂ.ಡಿ ಆಶರ್ ಒ, ಇತರ ನಿರ್ದೇಶಕರು ಮತ್ತು ಮ್ಯಾನೇಜ್ಮೆಂಟ್ ಸದಸ್ಯರು ಉಪಸ್ಥಿತರಿದ್ದರು.































ಸ್ಥಳಾಂತರಗೊಂಡ ದೊಡ್ಡದಾದ ಶೋರೂಂ ಮತ್ತು ಸುಖಸಾಧನ ವಾತಾವರಣದೊಂದಿಗೆ ತಮ್ಮ ನೆಚ್ಚಿನ ಶಾಪಿಂಗ್ ತಾಣವನ್ನಾಗಿ ಪರಿಗಣಿಸಿರುವ ಗ್ರಾಹಕರಿಗೆ ಉತ್ತಮವಾದ ಶಾಪಿಂಗ್ ಅನುಭವವನ್ನು ನೀಡಲಿದೆ. ಇಲ್ಲಿ ಅತ್ಯಂತ ಸುಧಾರಿತ ಪರಿಸರ ಮತ್ತು ಅತ್ಯುತ್ತಮವಾದ ಹೆಣೆದ ವಿನ್ಯಾಸಗಳು ಇವೆ.
ಈ ಹೊಸ ಶೋರೂಂನಲ್ಲಿ ಇತ್ತೀಚಿನ ಟ್ರೆಂಡಿಂಗ್ ವಿನ್ಯಾಸಗಳು, ನುರಿತ ಕರಕುಶಲಕರ್ಮಿಗಳಿಂದ ತಯಾರಿಸಲಾಗಿರುವ ಸಾಂಪ್ರದಾಯಿಕ ಹ್ಯಾಂಡ್ಪಿಕ್ಡ್ ಸಂಗ್ರಹಗಳು ಸೇರಿದಂತೆ ಅತ್ಯಾಕರ್ಷಕವಾದ ವಿನ್ಯಾಸಗಳ ಆಭರಣಗಳು ಇವೆ. ಕರಾವಳಿ ಕರ್ನಾಟಕದ ಸಂಸ್ಕೃತಿ ಮತ್ತು ಆಚರಣೆಗಳಿಗೆ ತಕ್ಕಂತಹ ಆಭರಣಗಳನ್ನು ಪ್ರದರ್ಶಿಸುವುದಲ್ಲದೇ, ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಪ ಬ್ರ್ಯಾಂಡ್ಗಳಾದ ಮೈನ್ ಡೈಮಂಡ್ ಜ್ಯುವೆಲ್ಲರಿ, ಡಿವೈನ್ ಭಾರತೀಯ ಪರಂಪರೆಯ ಆಭರಣ, ಎರಾ ಅನ್ಕಟ್ ವಜ್ರಾಭರಣ, ಎಥ್ನಿಕ್ ಕರಕುಶಲ ವಿನ್ಯಾಸದ ಆಭರಣ, ಪ್ರೆಸಿಯಾ ಎಂಬ ಬೆಲೆ ಬಾಳುವ ಹರಳಿನ ಆಭರಣ, ಝೌಲ್ ಲೈಫ್ಸ್ಟೈಲ್ ಆಭರಣ ಮತ್ತು ಸ್ಟಾರ್ಲೆಟ್ ಮಕ್ಕಳ ಆಭರಣ ಸೇರಿದಂತೆ ಹಲವು ಬಗೆಯ ಆಭರಣಗಳನ್ನೂ ಪ್ರದರ್ಶಿಸಲಾಗುತ್ತಿದೆ.
ಮಲಬಾರ್ ಗ್ರೂಪ್ ಅಧ್ಯಕ್ಷ ಎಂಪಿ ಅಹ್ಮದ್ ಅವರು ಈ ಬಗ್ಗೆ ಮಾತನಾಡಿ, "ಮಂಗಳೂರಿನ ಹೊಸ ಸ್ಟೋರ್ ಅದರ ಸೊಗಸಾದ ಉತ್ಪನ್ನ ಕೊಡುಗೆಗಳು ಮತ್ತು ಸೇವಾ ಉತ್ಕೃಷ್ಟತೆಯನ್ನು ಹೊಂದಿದೆ. ಶೋರೂಂ ಸಂಖ್ಯೆ ಮತ್ತು ಮಾರಾಟದಲ್ಲಿ ವಿಶ್ವದ ನಂಬರ್ ಒನ್ ಚಿನ್ನಾಭರಣ ರೀಟೇಲ್ ಬ್ರ್ಯಾಂಡ್ ಆಗಬೇಕೆಂಬ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ" ಎಂದು ತಿಳಿಸಿದರು.
ಮಲಬಾರ್ ಗೋಲ್ಡ್ & ಡೈಮಂಡ್ಸ್ ಇತ್ತೀಚೆಗೆ "ಒಂದು ಭಾರತ ಒಂದು ಚಿನ್ನದ ಬೆಲೆ" ಯೋಜನೆಯಡಿ ದೇಶಾದ್ಯಂತ ಏಕರೂಪದ ಚಿನ್ನದ ಬೆಲೆಯನ್ನು ಜಾರಿಗೆ ತಂದಿದೆ. ಗ್ರೂಪ್ ಇತ್ತೀಚೆಗೆ ಗೋಲ್ಡ್ ಬುಲಿಯನ್ ಉದ್ಯಮವನ್ನು ಪ್ರವೇಶಿಸಿದೆ ಮತ್ತು ಇದರ ಜವಾಬ್ದಾರಿಯುತ ಮೂಲದ ಚಿನ್ನದ ಗಟ್ಟಿಗಳು ಚಿನ್ನವನ್ನು ಖರೀದಿಸಲು ಬಯಸುವ ಆಭರಣ ತಯಾರಕರು, ಸಣ್ಣ ಚಿನ್ನದ ವ್ಯಾಪಾರಿಗಳು ಮತ್ತು ರೀಟೇಲ್ ಹೂಡಿಕೆದಾರರಿಗೆ ಲಭ್ಯವಿವೆ. ಈ ಚಿನ್ನದ ಗಟ್ಟಿಗಳನ್ನು ಮಲಬಾರ್ ಬುಲಿಯನ್ ಆ್ಯಪ್ ಅನ್ನು ಬಳಸಿ ಖರೀದಿಸಬಹುದಾಗಿದೆ.
ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಬದ್ಧತೆಯಂತೆ ತನ್ನ ಗ್ರಾಹಕರಿಗೆ 10 ಭರವಸೆಗಳನ್ನು ನೀಡುತ್ತಿದೆ. ನಿಖರವಾದ ತಯಾರಿಕಾ ವೆಚ್ಚ, ಸ್ಟೋನ್ ತೂಕ, ನಿವ್ವಳ ತೂಕ ಮತ್ತು ಆಭರಣದ ಸ್ಟೋನ್ ಶುಲ್ಕ, ಆಭರಣಕ್ಕೆ ಖಚಿತ ಜೀವನಪರ್ಯಂತ ಉಚಿತ ನಿರ್ವಹಣೆ, 100% ಬಿಐಎಸ್ ಹಾಲ್ಮಾರ್ಕ್ ಹೊಂದಿರುವ ಶುದ್ಧ ಚಿನ್ನ, ಚಿನ್ನ ವಿನಿಮಯದಲ್ಲಿ ಶೂನ್ಯ ಕಡಿತ, ಐಜಿಐ ಮತ್ತು ಜಿಐಎ ಪರೀಕ್ಷಿಸಲಾಗಿರುವ ಮತ್ತು ಪ್ರಮಾಣೀಕೃತ ವಜ್ರಗಳು, ವಜ್ರವೂ 28 ಆಂತರಿಕ ಗುಣಮಟ್ಟ ಪರೀಕ್ಷೆಗಳಿಗೆ ಒಳಗಾಗುತ್ತದೆಯಲ್ಲದೆ, ಬೈ-ಬ್ಯಾಕ್ ಗ್ಯಾರಂಟಿ, ಆಭರಣವು ಪುರಕ ವಿಮೆಗೆ ಒಳಪಡುತ್ತದೆ. ನ್ಯಾಯಯುತ ಬೆಲೆಯ ನೀತಿಗಳು, ಜವಾಬ್ದಾರಿಯುತ ಮೂಲದ ಉತ್ಪನ್ನಗಳು, ಕಾರ್ಮಿಕರಿಗೆ ನ್ಯಾಯಯುತ ಅಭ್ಯಾಸಗಳ ಭರವಸೆಯನ್ನು ನೀಡಲಾಗುತ್ತದೆ. ತೆರಿಗೆ ವಂಚನೆ, ಹಣದ ಅವ್ಯವಹಾರ ಮತ್ತು ಗ್ರಾಹಕರಿಗೆ ವಂಚನೆಯಂತಹ ಪ್ರಕರಣಗಳು ನಡೆಯುತ್ತಿರುವ ಚಿನ್ನ ಮತ್ತು ಬುಲಿಯನ್ ಉದ್ಯಮದಲ್ಲಿ ಮಲಬಾರ್ ಬ್ರ್ಯಾಂಡ್ ತನ್ನ ಜವಾಬ್ದಾರಿಯುತವಾದ ಪದ್ಧತಿಗಳನ್ನು ಅನುಸರಿಸಿಕೊಂಡು ಬರುತ್ತಿದೆ. ಇದಲ್ಲದೇ, ಮಲಬಾರ್ ಗ್ರೂಪ್ ತನಗೆ ಬರುವ ಲಾಭಾಂಶದಲ್ಲಿ ಶೇ.5 ರಷ್ಟು ಪಾಲನ್ನು ಸಾಮಾಜಿಕ ಸೇವೆಗಳಿಗೆ ಮೀಸಲಿಡುತ್ತಾ ಬಂದಿದೆ. ಭಾರತ ಮತ್ತು ವಿದೇಶಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಉದ್ದೇಶಗಳಿಗೆ ಈ ಹಣವನ್ನು ಬಳಸುತ್ತಿದೆ. ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಕೈಗೆಟುಕುವ ದರದ ಮನೆಗಳ ನಿರ್ಮಾಣ ಮತ್ತು ಪರಿಸರ ಸಂರಕ್ಷಣೆಯಂತಹ ಕಾರ್ಯಗಳಿಗೆ ಈ ಹಣವನ್ನು ವಿನಿಯೋಗಿಸುತ್ತಿದೆ.